ಬೆಂಗಳೂರು: ವ್ಯಾಕ್ಸಿನೇಷನ್ ಒಂದು ದೊಡ್ಡ ಬೋಗಸ್, ನನ್ನ ಬಳಿ ದಾಖಲೆ ಇದೆ: ಡಿ.ಕೆ ಶಿವಕುಮಾರ್

ಬೆಂಗಳೂರು: ವ್ಯಾಕ್ಸಿನೇಷನ್ ಒಂದು ದೊಡ್ಡ ಬೋಗಸ್, ನನ್ನ ಬಳಿ ದಾಖಲೆ ಇದೆ: ಡಿ.ಕೆ ಶಿವಕುಮಾರ್

ಬೆಂಗಳೂರು: ಕೊರೊನಾ ನಿರೋಧಕ ಲಸಿಕೆ ನೀಡಿಕೆ ಒಂದು ದೊಡ್ಡ ಬೋಗಸ್. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇವೆ. ಈ ಬಗ್ಗೆ ಪ್ರತ್ಯೇಕ ಸುದ್ದಿಗೋಷ್ಟಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ. ಈ ವಿಚಾರವಾಗಿ ಮಂತ್ರಿಗಳು ಹೇಳಿದ್ದೆಲ್ಲ ಬರೀ ಸುಳ್ಳು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹೊಸ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಪಕ್ಷ ಬಿಟ್ಟವರನ್ನು ಪಕ್ಷಕ್ಕೆ ವಾಪಸ್ ಕರೆತರುವ ವಿಚಾರವಾಗಿ ನಾನು ಪಕ್ಷ ಬಿಟ್ಟುಹೋದ ಆ 17 ಜನಕ್ಕೆ ಅಂತ ಹೇಳಿಲ್ಲ. ಯಾರೆಲ್ಲಾ ನಮ್ಮ ಪಕ್ಷಕ್ಕೆ ಬರಬೇಕು ಅಂತಿದ್ದಾರೆ ಅವರಿಗೆ ಹೇಳಿದ್ದೇನೆ. ಯಾರಿಗೆ ನಮ್ಮ ಲೀಡರ್ ಶಿಪ್, ನಮ್ಮ ಸಿದ್ಧಾಂತದ ಮತ್ತು ಪಕ್ಷದ ಬಗ್ಗೆ ಒಪ್ಪಿಗೆ ಇದೆಯೋ ಅವರೆಲ್ಲ ಅರ್ಜಿ ಹಾಕಬಹುದು. ಹಾಗೂ ಯಾರು ಬೇಕಾದ್ರೂ ಅರ್ಜಿ ಹಾಕಬಹುದು ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.