ಬೆಂಗಳೂರು : ವರ್ಗಾವಣೆಯಾದ 2 ದಿನಗಳಲ್ಲಿ ಮತ್ತದೆ ಸ್ಥಾನಕ್ಕೆ ಬಂದ ‘IAS ಅಧಿಕಾರಿ ಶಿಖಾ’

ಬೆಂಗಳೂರು : ವರ್ಗಾವಣೆಯಾದ 2 ದಿನಗಳಲ್ಲಿ ಮತ್ತದೆ ಸ್ಥಾನಕ್ಕೆ ಬಂದ ‘IAS ಅಧಿಕಾರಿ ಶಿಖಾ’

ಬೆಂಗಳೂರು: ರಾಜ್ಯ ಸರ್ಕಾರ ಎರಡು ದಿನಗಳ ಹಿಂದಷ್ಟೇ 7 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಬಿಎಂಟಿಸಿ ಎಂಡಿಯಾಗಿದ್ದಂತ ಶಿಖಾ ಕೂಡ ಎತ್ತಂಗಡಿಯಾಗಿದ್ದರು. ಸದ್ಯ ಐಎಎಸ್ ಅಧಿಕಾರಿ ಶಿಖಾ ಅವರನ್ನು ಮತ್ತೆ ಬಿಎಂಟಿಸಿ ಎಂಡಿಯಾಗಿ ಮರುನೇಮಕ ಮಾಡಿ ಆದೇಶಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಆದೇಶ ಹೊರಡಿಸಿದ್ದು, ಕರ್ನಾಟಕ ಕೆಡರ್ 2004ರ ಬ್ಯಾಚ್ ಐಎಎಸ್ ಅಧಿಕಾರಿ ಶಿಖಾ ಸಿ ಅವರನ್ನು ಕಮರ್ಷಿಯಲ್ ಟ್ಯಾಕ್ ಕಮೀಷನರ್ ಹುದ್ದೆಯಿಂದ ಕೂಡಲೇ ಜಾರಿಗೆ ಬರುವಂತೆ ಬಿಎಂಟಿಸಿಯ ಎಂಡಿಯಾಗಿ ನೇಮಕ ಮಾಡಿದ್ದಾರೆ.

ಇದೇ ವೇಳೆ ಮತ್ತೊಬ್ಬ ಐಎಎಸ್ ಅಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅವರನ್ನು ಕೊಪ್ಪಳ ಡಿಸಿ ಹುದ್ದೆಯಿಂದ ವರ್ಗಾವಣೆ ಮಾಡಿ, ಕೊಪ್ಪಳ ಜಿಲ್ಲಾ ಪಂಚಾಯ್ತಿಯ ಸಿಇಓ ಆಗಿ ನೇಮಕ ಮಾಡಿ ಆದೇಶಿಸಲಾಗಿದೆ.