Please assign a menu to the primary menu location under menu

National

ಫೇಸ್‌ಬುಕ್‌ಗೆ 14 ದಿನಗಳ ಹೆಚ್ಚುವರಿ ಕಾಲಾವಕಾಶ

ಫೇಸ್‌ಬುಕ್‌ಗೆ 14 ದಿನಗಳ ಹೆಚ್ಚುವರಿ ಕಾಲಾವಕಾಶ

ನವದೆಹಲಿ: 2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಫೇಸ್‌ಬುಕ್‌ಗೆ ಭಾರತೀಯ ಕಚೇರಿಗೆ ನೀಡಲಾಗಿದ್ದ ಕಾಲಾವಕಾಶವನ್ನು ದೆಹಲಿಯ ಶಾಂತಿ ಮತ್ತು ಸೌಹಾರ್ದತೆ ಸಮಿತಿಯು 14 ದಿನಗಳ ಕಾಲ ವಿಸ್ತರಿಸಿದೆ.

ಫೇಸ್‌ಬುಕ್‌ನಲ್ಲಿ ಹರಿದಾಡಿದ ದ್ವೇಶ ಸಂದೇಶಗಳಿಂದಲೇ ಗಲಭೆ ಹೆಚ್ಚಾಗಿದ್ದಾಗಿ ವರದಿಯಾಗಿದ್ದು, ಇದರ ಬಗ್ಗೆ ನ.2ರೊಳಗೆ ವಿವರಣೆ ನೀಡಲು ಫೇಸ್‌ಬುಕ್‌ಗೆ ಅ.27ರಂದು ಸಮನ್ಸ್‌ ನೀಡಲಾಗಿತ್ತು. ಆದರೆ ವಿವರಣೆ ನೀಡಲು ಸೂಕ್ತ ಅಧಿಕಾರಿಗಳನ್ನು ಹುಡುಕುತ್ತಿರುವುದಾಗಿ ಫೇಸ್‌ಬುಕ್‌ ತಿಳಿಸಿದ್ದು, ಅದಕ್ಕಾಗಿ 14 ದಿನಗಳ ಹೆಚ್ಚುವರಿ ಕಾಲಾವಕಾಶ ಕೇಳಿದೆ. ಶಾಸಕ ರಾಘವ್‌ ಛಢಾ ಅವರ ನೇತೃತ್ವದ ಸಮಿತಿಯು ಕಾಲಾವಕಾಶ ವಿಸ್ತರಿಸಿದೆ.

ಜುಕರ್‌ಬರ್ಗ್‌ ರಾಜೀನಾಮೆ ಕೊಡಲಿ:
ಇದೇ ವೇಳೆ ಫೇಸ್‌ಬುಕ್‌ ಸಂಸ್ಥೆಯ ಮಾಜಿ ಇಂಜಿನಿಯರ್‌ ಫ್ರಾನ್ಸಸ್‌ ಹೌಗೆನ್‌, ಫೇಸ್‌ಬುಕ್‌ ಸಂಸ್ಥೆಯ ಹೆಸರನ್ನು ಮೆಟಾವರ್ಸ್‌ ಆಗಿ ಬದಲಾಯಿಸಿದ್ದನ್ನು ವಿರೋಧಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಈಗಾಗಲೇ ಇದ್ದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವದನ್ನು ಬಿಟ್ಟು ಮೆಟಾವರ್ಸ್‌ ಮಾಡಿದ್ದು ಸರಿಯಲ್ಲ. ಜುಕರ್‌ಬರ್ಗ್‌ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕು ಎಂದು ಅವರು ಹೇಳಿದ್ದಾರೆ.


Leave a Reply

error: Content is protected !!