ಮಂಡ್ಯ: ಆರ್ಟಿಐ ಅಡಿ ಮಾಹಿತಿ ನೀಡದ ಮದ್ದೂರು ತಹಸೀಲ್ದಾರ್ ನರಸಿಂಹಮೂರ್ತಿಗೆ 7,500 ರೂಪಾಯಿ ದಂಡ ವಿಧಿಸಲಾಗಿದೆ.
ಆರ್ಟಿಐ ಮೂಲಕ ಮಾಹಿತಿ ಕೇಳಿ ನಾರಾಯಣಸ್ವಾಮಿ ಎಂಬುವವರು ಅರ್ಜಿ ಸಲ್ಲಿಸಿದ್ದರು. ನಿಯಮದ ಪ್ರಕಾರ 30 ದಿನಗಳಾದ್ರು ಅಧಿಕಾರಿಗಳು ಮಾಹಿತಿ ಕೊಟ್ಟಿರಲಿಲ್ಲ.
ಇದರಿಂದ ಅಸಮಾಧಾನ ಅರ್ಜಿದಾರ ಕರ್ನಾಟಕ ಮಾಹಿತಿ ಆಯೋಗದ ಮೊರೆ ಹೋಗಿದ್ದರು. ಕೊನೆಗೆ ಒಂದು ವರ್ಷದ ಬಳಿಕ ಇದು ಹಳೇ ಮಾಹಿತಿ ನಮ್ಮಲ್ಲಿ ಕಡತ ಇಲ್ಲ ಎಂದು ಉತ್ತರ ಬಂದಿತ್ತು. ಆದರೆ ಈ ಕಡತ ಶಾಶ್ವತ ದಾಖಲೆ ಆಗಿದ್ದರಿಂದ ಮಾಹಿತಿ ನೀಡಬೇಕಿತ್ತು.
ಕಡತ ನಿರ್ವಹಣೆ ಮಾಡದ್ದಕ್ಕೆ ಆಯೋಗವೂ ಕೂಡ ನೋಟಿಸ್ ನೀಡಿತ್ತು. ನೋಟಿಸ್ಗೆ ತಹಶೀಲ್ದಾರ್ ಅವರು ಲಿಖಿತ ಉತ್ತರವನ್ನೂ ಸಲ್ಲಿಸಿರಲಿಲ್ಲ. ಈ ತಪ್ಪಿಗೆ 7,500 ರೂ. ದಂಡ ವಿಧಿಸಿದೆ. ಮಾಸಿಕ ಸಂಬಳದಲ್ಲೇ ದಂಡ ಕಡಿತಗೊಳಿಸುವಂತೆ ಆದೇಶ ಮಾಡಲಾಗಿದೆ.