ವೆಲ್ಲಿಂಗ್ಟನ್: ದೇಶದಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದು, ಸತತ ನಾಲ್ಕು ದಿನಗಳಿಂದ ಸುಮಾರು 4 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಸರ್ಕಾರ ಭಾರತದಿಂದ ಆಗಮಿಸುವವರಿಗೆ ನಿರ್ಬಂಧ ಹೇರಿದೆ.
ನ್ಯೂಜಿಲೆಂಡ್ ನಲ್ಲಿ ಗುರುವಾರ 23 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇವರ ಪೈಕಿ 17 ಜನರು ಭಾರತದಿಂದ ಆಗಮಿಸಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 2 ವಾರಗಳ ಕಾಲ ಭಾರತದಿಂದ ಆಗಮಿಸುವವರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ ಎಂದು ನ್ಯೂಜಿಲೆಂಡ್ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ ತಿಳಿಸಿದ್ದಾರೆ.
ಈ ನಿರ್ಬಂಧ ಏಪ್ರಿಲ್ 11 ರಿಂದ ಏಪ್ರಿಲ್ 28 ರವರೆಗೆ ಜಾರಿಯಲ್ಲಿರಲಿದೆ. ಆ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೊರೊನಾ ಸೋಂಕು ದೇಶದಲ್ಲಿ ಹರಡದಂತೆ ತಡೆಯಲು ಈ ಕ್ರಮ ತೆಗೆದುಕೊಂಡಿದ್ದೇವೆ ಎಂದು ಆರ್ಡೆರ್ನ್ ತಿಳಿಸಿದ್ದಾರೆ.
ನ್ಯೂಜಿಲೆಂಡ್ ನಲ್ಲಿ ಕೊರೊನಾ ಸೋಂಕು ಬಹುತೇಕ ನಿಯಂತ್ರಣದಲ್ಲಿದ್ದು, ಕಳೆದ 40 ದಿನಗಳಲ್ಲಿ ಸಮುದಾಯದಲ್ಲಿ ಸೋಂಕು ಹರಡಿದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಬುಧವಾರ 7 ಜನರಿಗೆ ಸೋಂಕು ಪತ್ತೆಯಾಗಿದೆ. ಇದು ಕಳೆದ ಅಕ್ಟೋಬರ್ ಬಳಿಕ ದೇಶದಲ್ಲಿ ಕಂಡು ಬಂದ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಸಂಖ್ಯೆಯಾಗಿದೆ. ಆದರೆ ಇತ್ತೀಚೆಗೆ ಕೊರೊನಾ ಸೋಂಕು ಇರುವವರು ದೇಶಕ್ಕೆ ಆಗಮಿಸಿದ್ದಾರೆ. ಅದರಲ್ಲೂ ಭಾರತದಿಂದ ಆಗಮಿಸಿದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಆರ್ಡೆರ್ನ್ ತಿಳಿಸಿದ್ಧಾರೆ.
1,26,789 ಜನರಿಗೆ ಕೊರೊನಾ ಪಾಸಿಟಿವ್
ಬುಧವಾರ ಬೆಳಗ್ಗೆ 8 ಗಂಟೆಯಿಂದ ಗುರುವಾರ ಬೆಳಗ್ಗೆ 8 ಗಂಟೆಯವರೆಗೆ ಒಟ್ಟು 1,26,789 ಹೊಸ ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 685 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಕೇಸ್ ಗಳ ಸಂಖ್ಯೆ 1,18,51,393 ಕ್ಕೆ ಏರಿಕೆಯಾಗಿದೆ. ಆಕ್ಟೀವ್ ಕೇಸ್ ಗಳ ಸಂಖ್ಯೆ ಸಹ 9,10,319 ಕ್ಕೆ ಏರಿಕೆಯಾಗಿದೆ.
📍Total #COVID19 Cases in India (as on April 8, 2021)
▶️91.67% Cured/Discharged/Migrated (1,18,51,393)
▶️7.04% Active cases (9,10,319)
▶️1.29% Deaths (1,66,862)Total COVID-19 confirmed cases = Cured/Discharged/Migrated+Active cases+Deaths#StaySafe pic.twitter.com/myA0v3LPhe
— #IndiaFightsCorona (@COVIDNewsByMIB) April 8, 2021
ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸೋಮವಾರ ಬೆಳಗ್ಗೆ 8 ಗಂಟೆಯವರೆಗಿನ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು 1,03,558 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅದಾದ ಬಳಿಕ ಸೋಮವಾರ 24 ಗಂಟೆಗಳ ಅವಧಿಯಲ್ಲಿ 96,982 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಈಗ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಬುಧವಾರ ಬೆಳಗ್ಗೆ 8 ಗಂಟೆವರೆಗಿನ 24 ಗಂಟೆಗಳ ಅವಧಿಯಲ್ಲಿ 1,15,736 ಜನರಲ್ಲಿ ಸೋಂಕು ದೃಢಪಟ್ಟಿತ್ತು.
#IndiaFightsCorona:#COVID19Vaccination Status (As on 07th April, 2021, 08:00 PM)
✅Total Vaccine Doses administered: 8,83,72,277
✅Vaccine Doses administered: 13,14,623#We4Vaccine #LargestVaccinationDrive@ICMRDELHI @DBTIndia pic.twitter.com/hfhifR3GSQ
— #IndiaFightsCorona (@COVIDNewsByMIB) April 8, 2021
2 ನೇ ಡೋಸ್ ಲಸಿಕೆ ಪಡೆದ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಬೆಳಗ್ಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಯ 2 ನೇ ಡೋಸ್ ಪಡೆದರು. ಮಾರ್ಚ್ 1 ರಂದು ಲಸಿಕೆಯ ಮೊದಲ ಡೋಸ್ ಪಡೆದಿದ್ದರು. ಲಸಿಕೆಯ 2 ನೇ ಡೋಸ್ ಪಡೆದ ಕುರಿತು ಮಾಹಿತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಮೋದಿ ‘ಲಸಿಕೆ ಪಡೆಯುವುದು ವೈರಸ್ ಅನ್ನು ಮಣಿಸುವ ಒಂದು ಮಾರ್ಗವಾಗಿದೆ. ಲಸಿಕೆ ಪಡೆಯಲು ಅರ್ಹರಾಗಿರುವವರು ಕೂಡಲೇ ಲಸಿಕೆ ಪಡೆಯಬೇಕು ಎಂದು ಕರೆ ನೀಡಿದ್ದಾರೆ.
Vaccination will play a vital role in defeating the virus
PM @narendramodi fulfilled his duty & took his 2nd dose of #COVIDVaccine at AIIMS today
If eligible, you too can register yourself at https://t.co/mdKV3D0l5T#LargestVaccineDrive#Unite2FightCorona pic.twitter.com/giWZhTosYK
— #IndiaFightsCorona (@COVIDNewsByMIB) April 8, 2021
Got my second dose of the COVID-19 vaccine at AIIMS today.
Vaccination is among the few ways we have, to defeat the virus.
If you are eligible for the vaccine, get your shot soon. Register on https://t.co/hXdLpmaYSP. pic.twitter.com/XZzv6ULdan
— Narendra Modi (@narendramodi) April 8, 2021