The news is by your side.

ಗರುಡ ಪುರಾಣದ ಪ್ರಕಾರ ಈ 8 ರೀತಿಯ ಜನರ ಮನೆಯಲ್ಲಿ ಆಹಾರ ಸೇವಿಸಲೇಬಾರದಂತೆ, ಯಾಕೆ ಗೊತ್ತಾ..

ಹಿಂದೂ ಪುರಾಣಕ್ಕೆ ಸಂಬಂಧಪಟ್ಟ ಹಾಗೆ ಅನೇಕ ಪುರಾಣ ಗ್ರಂಥಗಳು ಇವೆ ಅಂತಹ ವೈಶಿಷ್ಟ್ಯತೆಯುಳ್ಳ ಪುರಾಣ ಗ್ರಂಥಗಳಲ್ಲಿ ಗರುಡ ಪುರಾಣವು ಕೂಡ ಒಂದಾಗಿದೆ ಈ ಗರುಡ ಪುರಾಣ ತಿಳಿಸುವ ಹಾಗೆ ವ್ಯಕ್ತಿಗಳು ಇಂತಹ ಜಾಗಗಳಲ್ಲಿ ಯಾವತ್ತಿಗೂ ಕೂಡ ಊಟ ಸೇವಿಸಬಾರದೇ ಹಾಗಾದರೆ ವ್ಯಕ್ತಿ ಯಾರ ಮನೆಯಲ್ಲಿ .

ಅನ್ನಪೂರ್ಣೆಯ ಸಮಾನವಾದ ಅನ್ನವನ್ನು ಸೇವಿಸಬಾರದು ಮತ್ತು ಯಾಕೆ ಎಂಬುದನ್ನು ತಿಳಿದುಕೊಳ್ಳಿ ಇಂದಿನ ಮಾಹಿತಿಯಲ್ಲಿ ಗರುಡ ಪುರಾಣ ಹೇಳುತ್ತಿರುವಂತಹ ಈ ಒಂದು ವಿಚಾರಗಳನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಬೇರೆಯವರಿಗೂ ಕೂಡ ತಪ್ಪದೇ ಶೇರ್ ಮಾಡಿ.

ಗರುಡ ಪುರಾಣದಲ್ಲಿ ಸುಮಾರು ಇನ್ನೂರ ಎಪ್ಪತ್ತು ಏಳು ಅಧ್ಯಾಯಗಳಿದ್ದು ಹದಿನೆಂಟು ಸಾವಿರ ಶ್ಲೋಕಗಳಿವೆ ಈ ಶ್ಲೋಕಗಳು ಸಾಮಾನ್ಯ ಜನರಿಗೆ ಜೀವನಕ್ಕೆ ಬೇಕಾಗಿರುವ ಕೆಲವೊಂದು ಸರಳ ಸಲಹೆಗಳನ್ನು ನೀಡುತ್ತಾ ಜನರ ಜೀವನವನ್ನು ಒಳ್ಳೆಯ ಮಾರ್ಗದಲ್ಲಿ ತಿದ್ದುವುದರಲ್ಲಿ ಸಹಕರಿಸುತ್ತಿದೆ.

ಹಾಗಾದರೆ ಈ ಪುರಾಣವು ತಿಳಿಸುವ ಹಾಗೆ ಎಂತಹ ವ್ಯಕ್ತಿಗಳ ಮನೆಯಲ್ಲಿ ಊಟವನ್ನು ಸೇವಿಸಬಾರದು ಅಂದರೆ ಮೊದಲನೆಯದಾಗಿ ಕಳ್ಳತನ ಮತ್ತು ಮೋಸ ಮಾಡುವವರ ಮನೆಯಲ್ಲಿ ಅನ್ನವನ್ನು ಸೇವಿಸಬಾರದು ಯಾಕೆಂದರೆ ಇಂತಹ ಜನರು ಅನ್ನವನ್ನು ಕೊಂಡುಕೊಂಡು ಬರುವುದಕ್ಕೆ ಮೋಸ ಮಾಡಿದ ಹಣವನ್ನು ಬಳಸುತ್ತಾರೆ ಈ ಅನ್ನವನ್ನು ತಿನ್ನುವುದರಿಂದ ಅದರಲ್ಲಿ ನೀವು ಕೂಡ ಪಾಲುದಾರರಾದ ಹಾಗೆ ಆಗುತ್ತದೆ ನೀವು ಕೂಡ ಮೋಸದಲ್ಲಿ ಭಾಗಿಯಾದ ಹಾಗೆ ಆಗುತ್ತದೆ ಆದ ಕಾರಣ ಅಂಥವರ ಮನೆಯಲ್ಲಿ ಊಟವನ್ನು ಸೇವಿಸಬಾರದು.

ಗರುಡ ಪುರಾಣ ತಿಳಿಸುತ್ತಿದೆ ಕೆಟ್ಟ ನಡತೆಯುಳ್ಳ ಮಹಿಳೆಯ ಮನೆಯಲ್ಲಿಯೂ ಅನ್ನವನ್ನು ಸೇವಿಸಬಾರದು ಯಾಕೆ ಎಂದರೆ ಈ ಮಹಿಳೆ ತಿಳಿದಿದ್ದರೂ ಕೆಟ್ಟ ಮಾರ್ಗವನ್ನು ಹಿಡಿದು ಹಣವನ್ನು ಸಂಪಾದಿಸಿರುತ್ತಾರೆ ಅಂತಹವರ ಮನೆಯಲ್ಲಿ ಊಟವನ್ನು ಸೇವಿಸಿದರೆ ಆ ಒಂದು ಪಾಪ ನಿಮಗೂ ಕೂಡ ಸುತ್ತಿಕೊಳ್ಳುತ್ತದೆ ಎಂಬ ಕಾರಣದಿಂದಾಗಿ ಇವರ ಮನೆಯಲ್ಲಿಯೂ ಅನ್ನವನ್ನು ಸೇವಿಸಬಾರದು.

ಮೂರನೆಯದು ದುಬಾರಿ ಬಡ್ಡಿ ಪಡೆಯುವವರ ಮನೆಯಲ್ಲಿಯೂ ಅನ್ನವನ್ನು ಸೇವಿಸಬಾರದು ಯಾಕೆ ಅಂದರೆ ಇವರುಗಳು ಅನ್ಯಾಯದ ಹಣವನ್ನು ಸಂಪಾದನೆ ಮಾಡಿರುತ್ತಾರೆ ಈ ಅನ್ಯಾಯದಲ್ಲಿ ನೀವು ಕೂಡ ಪಾಲ್ಗೊಳ್ಳುವ ಹಾಗೆ ಆಗ ಬಾರದೆಂದು ಇಂಥವರ ಮನೆಯಲ್ಲಿಯೂ ಅನ್ನ ಸೇವಿಸಬಾರದು.

ಕೆಟ್ಟ ಕೋಪ ಮಾಡಿಕೊಳ್ಳುವ ವ್ಯಕ್ತಿಯ ಮನೆಯಲ್ಲಿಯೂ ಊಟವನ್ನು ಸೇವಿಸಬಾರದು ಯಾಕೆಂದರೆ ಅಂಥವರ ಮನೆಯಲ್ಲಿ ನೀವು ಊಟ ಸೇವಿಸುತ್ತಿರುವಾಗ ಕೋಪದಿಂದ ನಿಮ್ಮ ಮೇಲೆಯೂ ದಾಳಿ ಮಾಡುವ ಸಾಧ್ಯತೆ ಇರಬಹುದು ಆದ ಕಾರಣ ಇಂತಹವರ ಮನೆಯಲ್ಲಿಯೂ ಅನ್ನಕ್ಕೆ ಹೋಗಬೇಡಿ.

ದುಷ್ಟ ವ್ಯಕ್ತಿ ದುಷ್ಟ ರಾಜನ ಮನೆಯಲ್ಲಿಯೂ ಕೂಡ ಊಟವನ್ನು ಸೇವಿಸಬೇಡಿ ಯಾಕೆ ಅಂದರೆ ಇಂತಹ ದುಷ್ಟ ವ್ಯಕ್ತಿಗಳು ಪ್ರಾಮಾಣಿಕರಿಗೆ ಮೋಸ ಮಾಡಿ ಹಣವನ್ನು ಲಪಟಾಯಿಸುತ್ತಾರೆ ಅಂತಹವರ ಮನೆಯಲ್ಲಿ ನೀವು ಕೂಡ ಅನ್ನವನ್ನು ತಿಂದರೆ ನೀವು ಕೂಡ ಅದರಲ್ಲಿ ಭಾಗಿಯಾದಾಗುತ್ತದೆ.

ಬೆನ್ನಿಗೆ ಚೂರಿ ಎಳೆಯುವವರ ಮನೆಯಲ್ಲಿಯೇ ಊಟ ಸೇವಿಸಬೇಡಿ ಯಾಕೆ ಅಂದರೆ ಇಂತಹವರು ತೀಕ್ಷ್ಣ ಬುದ್ದಿಯಿಂದ ಹಣವನ್ನು ಸಂಪಾದಿಸಿರುತ್ತಾರೆ ಇಂತಹವರ ಮನೆಯಲ್ಲಿ ಊಟ ಮಾಡುವುದರಿಂದ ನಿಮಗೆ ಅವರ ಬುದ್ಧಿ ಒಲಿಯಬಹುದು ಅಥವಾ ಅವರ ಬುದ್ಧಿಯಿಂದ ನಿಮಗೆ ಕೆಡುಕಾಗಬಹುದು ಎಂಬ ಕಾರಣಕ್ಕೆ.

ಸ್ಮಗ್ಲಿಂಗ್ ಮಾಡುವಂತಹ ವ್ಯಕ್ತಿಗಳ ಮನೆಯಲ್ಲಿ ಅನ್ನವನ್ನು ಸೇವಿಸಬಾರದು ಯಾಕೆ ಅಂದರೆ ಇವರು ಹಣಕ್ಕಾಗಿ ಕೆಟ್ಟ ದಾರಿಯನ್ನು ಹಿಡಿದಿರುತ್ತಾರೆ ಹಾಗೆ ಅನ್ನ ಹಾಕುವ ನೆಪ ಮಾಡಿ ನಿಮಗೂ ಕೂಡ ಕೆಡುಕನ್ನುಂಟು ಮಾಡಿ ನಿಮ್ಮಿಂದಲೂ ಹಣ ವಸೂಲಿ ಮಾಡುವ ಸಾಧ್ಯತೆ ಇರಬಹುದು ಆದ್ದರಿಂದ ಎಚ್ಚರ.

ಕೊನೆಯದಾಗಿ ಗರುಡ ಪುರಾಣ ತಿಳಿಸುತ್ತದೆ ಬಡವ ಅಥವಾ ನಿರ್ಗತಿಕರ ಮನೆಯಲ್ಲಿ ಊಟವನ್ನು ಸೇವಿಸಬಾರದು ಅಂಥವರಿಂದ ದೇಣಿಗೆಯನ್ನು ಸ್ವೀಕಾರ ಮಾಡಬಾರದು ಎಂದು ಪುರಾಣ ತಿಳಿಸುತ್ತಿದೆ.

Like – Comment – Share
For More Articles And Videos Please Like Our Website And Facebook Page

- Advertisement -

Leave A Reply

Your email address will not be published.