The news is by your side.

ಸಿಹಿ ಸುದ್ದಿ ಹಂಚಿಕೊಂಡ ರಾಧಿಕಾ ಪಂಡಿತ್..

ರಾಧಿಕಾ ಪಂಡಿತ್ ಸ್ಯಾಂಡಲ್ವುಡ್ ನ‌ ಸಿಂಡ್ರೆಲಾ ಎಂದೇ ಕರೆಯುತ್ತಿದ್ದ ರಾಧಿಕಾ ಪಂಡಿತ್ ಅವರು ಸದ್ಯ ಕುಟುಂಬ ಮಕ್ಕಳು ಅಂತ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಹಿಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ..

ಹೌದು ರಾಧಿಕಾ ಪಂಡಿತ್ ಸದ್ಯ ಕೊರೊನಾ ಲಾಕ್ ಡೌನ್ ಇರುವ ಕಾರಣ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇದ್ದು ಅಭಿಮಾನಿಗಳೊಂದಿಗೆ ಮಾತನಾಡುತ್ತಿರುತ್ತಾರೆ.. ಇದೇ ಸಂದರ್ಭದಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ.. 2008 ರಲ್ಲಿ‌ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶ ಪಡೆದ ರಾಧಿಕಾ ಪಂಡಿತ್ ಹಿಂತಿರುಗಿ ನೋಡಿದ್ದೇ ಇಲ್ಲ.. ಸಾಲು ಸಾಲು ಸಿನಿಮಾಗಳು ಹಿಟ್ ಆದವು.. ಹಲವಾರು ಪ್ರಶಸ್ತಿಗಳು ರಾಧಿಕಾ ಅವರ ಮುಡಿಗೇರಿದವು.. ಆನಂತರ ರಾಧಿಕಾ 2016 ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸದ್ಯ ಎರಡು ಮುದ್ದಾದ ಮಕ್ಕಳ ತಾಯಿಯಾಗಿದ್ದಾರೆ..

ಮದುವೆಯ ನಂತರ ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡ ರಾಧಿಕಾ ಆ ಬಳಿಕ 2019 ರಲ್ಲಿ ಆದಿ ಲಕ್ಷ್ಮಿ ಪುರಾಣ ಸಿನಿಮಾ ಮೂಲಕ ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಂಡರು.. ಆದರೆ ಆನಂತರ ಜೂನಿಯರ್ ಹುಟ್ಟಿದ ಬಳಿಕ ಚಿತ್ರರಂಗದಿಂದ ದೂರಾಗ್ತಾರೆ ನಿರ್ಮಾಪಕರಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು.. ಆದರೀಗ ರಾಧಿಕಾ ಪಂಡಿತ್ ಮತ್ತೊಮ್ಮೆ ಸಿನಿಮಾದಲ್ಲಿ ಅಭಿನಯಿಸುವುದರ ಬಗ್ಗೆ ಖುದ್ದು ರಾಧಿಕಾ ಅವರೇ ತಿಳಿಸುವ ಮೂಲಕ ಚಿತ್ರರಂಗದಿಂದ ದೂರಾಗುವ ವಿಚಾರಕ್ಕೆ ತೆರೆ ಎಳೆದಿದ್ದು ಅಭಿಮಾನಿಗಳಿಗೆ ದಿಲ್ ಖುಷ್ ಎನ್ನಬಹುದು..

ಹೌದು ನಿನ್ನೆ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಅದೇ ಫೋಟೋಗೆ ಸಾಕಷ್ಟು ಅಭಿಮಾನಿಗಳು ಕಮೆಂಟ್ ಮಾಡಿದ್ದರು.. ನೀವು ಚಿತ್ರರಂಗಕ್ಕೆ ಮರಳುವುದು ಯಾವಾಗ ಎಂದು ಕೇಳಿದ ಅಭಿಮಾನಿಯ ಕಮೆಂಟ್ ಗೆ ಪ್ರತಿಕ್ರಿಯೆ ನೀಡಿದ ರಾಧಿಕಾ ಪಂಡಿತ್ ಆದಷ್ಟು ಬೇಗ ಎಂದು ಉತ್ತರಿಸಿದ್ದಾರೆ.. ಈ ಮೂಲಕ ರಾಧಿಕಾ ಪಂಡಿತ್ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸೋದು ಖಚಿತವಾಗಿದ್ದು ಸರಿಯಾದ ಕತೆ ಬಂದರೆ 2021 ರಲ್ಲಿ ರಾಧಿಕಾ ಪಂಡಿತ್ ರನ್ನು ತೆರೆ ಮೇಲೆ ನೋಡಬಹುದಾಗಿದೆ..

- Advertisement -

Leave A Reply

Your email address will not be published.