The news is by your side.

ಸೋಂಕು ಪತ್ತೆ, ಬೆಳಗಾವಿಯ ಪ್ರಮುಖ ಮಾರುಕಟ್ಟೆ ಖಡೇಬಜಾರ್ ಲಾಕ್ಡ್ ಡೌನ್

ಬೆಳಗಾವಿ : ಖಡೇಬಜಾರ್ ಮುಖ್ಯರಸ್ತೆಯಲ್ಲಿ ಮನೆಯಿರುವ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ಕಂಡುಬಂದ ಹಿನ್ನಲೆಯಲ್ಲಿ ಸಂಪೂರ್ಣ ಖಡೇಬಜಾರ್ ರಸ್ತೆಯನ್ನು ಮುಚ್ಚಲಾಗಿದೆ.

ವ್ಯಾಪಾರದ ಪ್ರಮುಖ ಕೇಂದ್ರ, ನಿತ್ಯ ಸಾವಿರಾರು ಜನ ಓಡಾಡುವ, ಜನರಿಂದ ತುಂಬಿರುತ್ತಿದ ರಸ್ತೆಯನ್ನು ಪೋತದಾರ್ ಜೆವೆಲೆರ್ಸ್ ನಿಂದ ಸಮಾದೇವಿ ಗುಡಿಯವರೆಗೆ ಬ್ಯಾರಿಕೇಡ್ ಹಾಕಿ ಕ್ಲೋಸ್ ಮಾಡಲಾಗಿದೆ.

ಉಳಿದೆಲ್ಲ ಪ್ರದೇಶಗಳಲ್ಲಿ ಸೋಂಕಿತರು ಕಂಡುಬಂದ ಮನೆಯ 50 ಅಡಿ ಸುತ್ತಲಿನ ವ್ಯಾಪ್ತಿಯನ್ನು ಲಾಕ್ ಮಾಡಲಾಗುತ್ತಿದೆ, ಆದರೆ, ಖಡೇಬಜಾರ್ ತುಂಬಾ ಜನಸಂದಣಿಯಿಂದ ಕುಡಿದ ಪ್ರದೇಶವಾಗಿದ್ದು ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚಾಗಿರುವದರಿಂದ ಬಂದ್ ಕ್ಷೇತ್ರದ ವ್ಯಾಪ್ತಿ ಹೆಚ್ಚಿಸಲಾಗಿದೆ.

- Advertisement -

Leave A Reply

Your email address will not be published.