The news is by your side.

ಈ ಬೀಜ ಬಳಸಿದರೆ ಹದಿನೈದು ದಿನಗಳಲ್ಲಿ ಬೊಜ್ಜು ಮಾಯ ಮನೆ ಮದ್ದು

ಈ ಬೀಜ ಬಳಸಿದರೆ ಹದಿನೈದು ದಿನಗಳಲ್ಲಿ ಬೊಜ್ಜು ಮಾಯಇತ್ತೀಚಿನ ದಿನಗಳಲ್ಲಿ ವಯಸ್ಕರಲ್ಲಿ ಮತ್ತು ಮಕ್ಕಳಲ್ಲಿ ಬೊಜ್ಜು ಶೇಖರಣೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣವೇ ಆಹಾರ ಪದ್ಧತಿ ಎಂದು ಹೇಳಿದರೆ ತಪ್ಪಾಗಲಾರದು. ಬೇಕರಿ ತಿನಿಸು ಫಾಸ್ಟ್ ಫುಡ್ ಮತ್ತು ಅತಿಯಾದ ಸಕ್ಕರೆ ಅಂಶವನ್ನು ಹೊಂದಿರುವ ಆಹಾರ ಪದಾರ್ಥಗಳನ್ನೂ ಹೆಚ್ಚು ಸೇವಿಸುತ್ತಿರುವುದರಿಂದ ದೇಹದಲ್ಲಿ ಗೊತ್ತಿಲ್ಲದೆ ಬೊಜ್ಜು ಬೆಳೆಯಲು ಪ್ರಾರಂಭವಾಗುತ್ತದೆ. ಮತ್ತು ಹೆಚ್ಚು ಕಾಲ ಕುಳಿತು ಕೆಲಸವನ್ನು ಮಾಡುತ್ತಿರುವುದರಿಂದ ಅಂದರೆ ಒಂದೇ ಜಾಗದಲ್ಲಿ ಕುಳಿತು ಕೆಲಸವನ್ನು ಮಾಡುವುದರಿಂದ ಅತಿಯಾದ ಬೊಜ್ಜು ಉತ್ಪತ್ತಿಯಗುತ್ತದೆ. ಅಲ್ಲದೆ ದೇಹವು ವಿಕಾರವಾಗಿ ಅಂಕು ಡೊಂಕಾಗಿ ಬೆಳೆಯುತ್ತಾ ಹೋಗುತ್ತದೆ.

ಇದರಿಂದ ಜನರು ಸಮಾಜದಲ್ಲಿ ಮುಂದೆ ಬರಲು ಹಿಂದೆ ಜರಿಯುತ್ತಾರೆ. ಏಕೆಂದರೆ ಬೊಜ್ಜು ಹೆಚ್ಚಾಗಿ ದೇಹದಲ್ಲಿರು ವುದಾರಿಂದ ದೇಹವು ವಿಚಿತ್ರವಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಜನರು ಸಮಾಜದಲ್ಲಿ ಬೆರೆಯಲು ಮುಜುಗರ ಗೊಳ್ಳುತ್ತಾರೆ. ಈ ಬೊಜ್ಜನ್ನು ಕರಗಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾರೆ. ಮತ್ತು ವೈದ್ಯರ ಸಲಹೆಯನ್ನು ಪಡೆದು ದುಡ್ಡು ಹಾಳು ಮಾಡಿಕೊಳ್ಳ ತ್ತಾರೆ. ಹೀಗೆ ಮಾಡುವುದರಿಂದ ಕೆಲವರು ಬೊಜ್ಜಿನ ಸಮಸ್ಯೆಯಿಂದ ಪಾರಾಗಲು ಕೆಟ್ಟ ಕ್ರಮಗಳನ್ನು ಬಳಸುತ್ತಾರೆ. ಇದರಿಂದ ಅವರಿಗೆ ಲಾಭಗಳು ಆಗದೇ ನಷ್ಟವೇ ದೊರೆಯುತ್ತದೆ.

ಬೊಜ್ಜು ಕಡಿಮೆ ಮಾಡಲು ಕೆಲವರು ಡಯೆಟ್ ಮಾಡುತ್ತಾರೆ. ಪ್ರತಿ ನಿತ್ಯವೂ ಊಟ ಸೇವನೆಯನ್ನು ಕಡಿಮೆ ಮಾಡಿಕೊಳ್ಳುತ್ತಾ ಬರುತ್ತಾರೆ. ಆದರೆ ಅತಿಯಾದ ಡಯೆಟ್ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿದಿರುವುದಿಲ್ಲ. ಆದ್ದರಿಂದ ಬೊಜ್ಜು ಕಡಿಮೆ ಮಾಡಲು ಆರೋಗ್ಯಕರ ಪೌಷ್ಟಿಕಾಂಶ ಇರುವ ಮತ್ತು ಎಣ್ಣೆ ಮತ್ತು ಉಪ್ಪು ಕಡಿಮೆ ಇರುವ ಆಹಾರವನ್ನು ಸೇವನೆ ಮಾಡಬೇಕು. ಇದರಿಂದ ಬೊಜ್ಜು ತನ್ನಿಂದ ತಾನಗಿಯೇ ಕ್ರಮೇಣ ಕಡಿಮೆ ಆಗುತ್ತದೆ.

ಇನ್ನು ಕೆಲವು ಜನರು ಬೊಜ್ಜು ಕರಗಿಸಲು ಜಿಮ್ ಗೆ ಹೋಗಿ ಆಯಾಸವನ್ನು ಮಾಡಿಕೊಂಡು ಕಡಿಮೆ ಮಾಡಿಕೊಳ್ಳುತ್ತಾರೆ. ಹೌದು ಹೀಗೆ ಮಾಡುವು ದರಿಂದ ನೈಸರ್ಗಿಕವಾಗಿ ಬೆವರು ರಂಧ್ರಗಳ ಮೂಲಕ ಹೊರ ಹೋಗಿ ದೇಹದಲ್ಲಿ ಬೊಜ್ಜು ಕ್ರಮೇಣ ಕಡಿಮೆಯಾಗುತ್ತದೆ. ಇನ್ನು ಕೆಲವರು ಬೊಜ್ಜು ಬೇಗನೆ ಕರಬೇಕೆಂಬ ಆಸೆಯಿಂದ ಸ್ಟರಾಯಿಡ್ ಮಾತ್ರೆ ತೆಗೆದುಕೊಂಡು ಪ್ರಪಂಚದಲ್ಲಿ ಎಷ್ಟೋ ಜನರು ಪ್ರಾಣವನ್ನು ಕಡೆದುಕೊಂಡಿದ್ದರೆ. ಮಾತ್ರೆಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಅದಕ್ಕೆ ಬೊಜ್ಜು ಕರಗಿಸಲು ಸುಲಭವಾದ ಲಭ್ಯವಿರುವ

ಮಾರ್ಗವನ್ನು ಈ ಲೇಖನದಲ್ಲಿ ತಿಲಿಸಿಕೊಡುತ್ತೇವೆ. ಬೊಜ್ಜನ್ನು ಅತಿ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಯಾವುದೇ ವಯಸ್ಸಿನ ವ್ಯಕ್ತಿಗಳು ಕೂಡ ಬಳಸಿ ಬೊಜ್ಜಿಗೆ ಬೈ ಬೈ ಹೇಳಬಹುದು. ಅದು ಏನೆಂದರೆ ರಾತ್ರಿ ಒಂದು ಲೋಟ ನೀರಿಗೆ ಒಂದು ಟೇಬಲ್ ಚಮಚ ಕಾಮ ಕಸ್ತೂರಿ ಬೀಜ ಹಾಕಿ ರಾತ್ರಿ ಪೂರ್ತಿ ನೆನೆಯಲು ಬಿಡಿಬೇಕು. ಅದೇ ಲೋಟಕ್ಕೆ ಒಂದು ಚಮಚ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ದೇಹದಲ್ಲಿ ಇರುವ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು.

ಹೀಗೆ ಇದನ್ನು ಸತತವಾಗಿ ಹದಿನೈದು ದಿನಗಳ ಕಾಲ ಮಾಡಿ ಕುಡಿಯುವುದರಿಂದ ಬೊಜ್ಜು ತಕ್ಷಣವೇ ಕ್ರಮೇಣ ಕಡಿಮೆ ಆಗುತ್ತದೆ. ಮತ್ತು ದೇಹದಲ್ಲಿ ಉಷ್ಣತೆಯ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಕಾಮ ಕಸ್ತೂರಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.

- Advertisement -

Leave A Reply

Your email address will not be published.