The news is by your side.

ಹಾನಿಕಾರಕ ಸೊಂಕುಗಳಿಂದ ಪಾರಾಗಲು ಕಡಲೆಯಿಂದ ಹೀಗೆ ಮಾಡಿರಿ ಮನೆ ಮದ್ದು

ನಮಸ್ಕಾರ ಸ್ನೇಹಿತರೇ ಹುರಿಗಡಲೆ ಹುರಿಗಡಲೆಯನ್ನು ನಾವೆಲ್ಲರೂ ಸೇವಿಸುತ್ತೇವೆ. ಆದರೆ ಪ್ರತಿನಿತ್ಯವೂ ಇದನ್ನು ಸೇವಿಸುವವರು ಬಹಳ ಕಡಿಮೆ. ಇದನ್ನು ನಿತ್ಯವೂ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾನೇ ಲಾಭಗಳು ಇವೆ. ಅದನ್ನು ನೀವು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಬೇಡವಾದ ತಿಂಡಿಗಳ ಬದಲು ನಿತ್ಯವೂ ನೀವು ಮತ್ತು ನಿಮ್ಮ ಮಕ್ಕಳಿಗೆ ಸೇವಿಸಿ ನೋಡಿ.

ನಿಮ್ಮ ದೇಹಕ್ಕೆ ಹಲವಾರು ಲಾಭಗಳು ದೊರೆಯುತ್ತವೆ. ಇನ್ನೂ 99ರಷ್ಟು ಜನರಿಗೆ ಹುರಿಗಡಲೆ ಆರೋಗ್ಯದಾಯಕ ಲಾಭಗಳ ಬಗ್ಗೆ ತಿಳಿದೇ ಇಲ್ಲ. ಹುರಿಗಡಲೆ ಸೇವನೆ ಮಾಡುವುದರಿಂದ ಆಗುವ ಲಾಭಗಳು ಏನು ಒಬ್ಬ ವ್ಯಕ್ತಿ ಹುರಿಗಡಲೆಯನ್ನು ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ. ಹುರಿಗಡಲೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಎರಡು ವಿಧದಲ್ಲಿ ದೊರೆಯುತ್ತದೆ. ಒಂದು ಸಿಪ್ಪೆ ಇರುವ ಹುರಿಗಡಲೆ, ಎರಡನೆಯದು ಸಿಪ್ಪೆ ರಹಿತ ಹುರಿಗಡಲೆ ನಾವೆಲ್ಲ ಸಿಪ್ಪೆ ಇರುವ ಹುರಿಗಡಲೆಯನ್ನು ಸೇವಿಸುತ್ತೇವೆ.

ನಿಮ್ಮ ದೇಹಕ್ಕೆ ಹಲವಾರು ಲಾಭಗಳು ದೊರೆಯುತ್ತವೆ. ಇನ್ನೂ ಹುರಿಗಡಲೆಯಲ್ಲಿ ಹೇರಳವಾದ ಪೋಷಕಾಂಶಗಳಿವೆ. ಇದರಲ್ಲಿ ಪ್ರೊಟೀನ್ ಕಾರ್ಬೋ ಹೈಡ್ರೇಟ್ ಕಬ್ಬಿಣಾಂಶ ಹೇರಳವಾಗಿದೆ. ಹುರಿಗಡಲೆಯನ್ನು ಸೇವಿಸುವುದರಿಂದ ತುಂಬಾ ಆರೋಗ್ಯಕರ ಲಾಭಗಳು ಇವೆ. ಅದರಲ್ಲಿ ಎಷ್ಟು ಹುರಿ ಗಡಲೆಯನ್ನು ಸೇವಿಸಬೇಕು ನಿಮಗೆ ಗೊತ್ತಾ ಒಬ್ಬ ಆರೋಗ್ಯವಂತ ವ್ಯಕ್ತಿ ದಿನದಲ್ಲಿ ಒಂದು ಹಿಡಿಯಷ್ಟು ಹುರಿಗಡಲೆಯನ್ನು ಸೇವಿಸಬಹುದು. ಇನ್ನೂ ಹುರಿಗಡಲೆಯನ್ನು ಸೇವನೆ ಮಾಡುವುದರಿಂದ
ನಿಮ್ಮ ದೇಹಕ್ಕೆ ಸಿಗುವ ಲಾಭಗಳು ಆದರೂ ಏನು ಅದು ನಿಮಗೆ ಗೊತ್ತೇ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈಗಿನ ಕಾಲದಲ್ಲಿ ಹೆಮ್ಮಾರಿ ರೋಗಗಳು ಎಡ ಬಿಡದೇ

ಕಾಡುತ್ತಿವೆ. ಇಂತಹ ಹಾನಿಕಾರಕ ಸೊಂಕುಗಳಿಂದ ನಿಮ್ಮ ದೇಹವನ್ನು ಕಾಪಾಡಿಕೊಳ್ಳಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಉತ್ತಮ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೀವು ಹುರಿಗಡಲೆಯನ್ನು ಸೇವನೆ ಮಾಡಬಹುದು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮತ್ತು ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಬಹುದು. ನಿಮಗೆ ಗೊತ್ತಿರುವ ಹಾಗೇ ಮಲಬದ್ಧತೆ ಸಮಸ್ಯೆಯಿಂದ ಹಲವಾರು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.

ಆದ್ದರಿಂದ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೂ ಕೂಡ ಹುರಿಗಡಲೆ ತುಂಬಾನೇ ಒಳ್ಳೆಯದು. ಹಾಗೂ ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಇದರಿಂದ ಮುಖದಲ್ಲಿ ಒಳ್ಳೆಯ ಕಾಂತಿ ಬರುತ್ತದೆ. ಮೊಡವೆಗಳು ಕಣ್ಮರೆಯಾಗುತ್ತದೆ. ರಕ್ತ ಹೀನತೆಯ ಸಮಸ್ಯೆಯಿಂದ ಬಳಲುತ್ತಿರುವವರು ಹುರಿಗಡಲೆಯನ್ನು ತಪ್ಪದೇ ಸೇವಿಸಿ. ಇದರಲ್ಲಿ ಹೇರಳವಾದ ಕಬ್ಬಿಣಾಂಶ ಇರುವುದರಿಂದ ಇದು ರಕ್ತ ಹೀನತೆಯನ್ನು ಹೋಗಲಾಡಿಸುತ್ತದೆ.

ಸಕ್ಕರೆ ಕಾಯಿಲೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಹುರಿಗಡಲೆ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಮಧುಮೇಹ ರೋಗ ನಿಯಂತ್ರಣಕ್ಕೆ ಬರುತ್ತದೆ. ಉಸಿರಾಟದ ತೊಂದರೆ ಇರುವವರು ರಾತ್ರಿ ಹೊತ್ತು ಹುರಿಗಡಲೆಯನ್ನು ತಪ್ಪದೇ ಸೇವಿಸಿ. ಜೊತೆಗೆ ಬಿಸಿ ಹಾಲನ್ನು ಕುಡಿಯಿರಿ. ಇದರಿಂದ ಒಳ್ಳೆಯ ಆರಾಮ ದೊರೆಯುತ್ತದೆ. ಅದರಲ್ಲೂ ಮುಖ್ಯವಾಗಿ ಅಸ್ತಮಾ ಉಸಿರಾಟದ ತೊಂದರೆ ಇರುವವರಿಗೆ ಹುರಿಗಡಲೆ ತುಂಬಾನೇ ಒಳ್ಳೆಯದು.

ಇದರ ಸೇವನೆಯಿಂದ ಮುಕ್ತಿಯನ್ನು ಪಡೆಯಬಹುದು. ಹಾಗೂ ದೇಹದಿಂದ ಬೇಡದ ಕೊಬ್ಬನ್ನು ಕರಗಿಸುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದರಲ್ಲಿ ಅಧಿಕ ಪ್ರಮಾಣದಲ್ಲಿ ಫೈಬರ್ ಅಂಶ ಇರುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕಣ್ಣುಗಳ ದೃಷ್ಟಿಯನ್ನು ಹಾಗೂ ಮೂಳೆಗಳನ್ನು ಬಲಪಡಿಸುತ್ತದೆ. ಮತ್ತು ಹುರಿಗಡಲೆಯಿಂದ ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸಿ ಕೊಳ್ಳಬಹುದು.

ನೋಡಿದ್ರಾ ಮಿತ್ರರೇ ಇದು ಇಷ್ಟೇ ಅಲ್ಲದೇ ಹುರಿಗಡಲೆ ದೇಹಕ್ಕೆ ಶಕ್ತಿಯನ್ನು ಒದಗಿಸಿ ದೇಹವನ್ನು ಬಲಿಷ್ಠ ಗೊಳ್ಳುವಂತೆ ಶಕ್ತಿಯುತವಾಗಿ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ಹಾಗೂ ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ ಹುರಿಗಡಲೆಯನ್ನು ಕೊಡುವುದನ್ನು ಮರಿಯದಿರಿ. ನೀವು ಕುರುಕುರು ತಿಂಡಿ ತಿನಿಸುಗಳನ್ನು ಬಿಟ್ಟು ಒಂದು ಹಿಡಿಯಷ್ಟು ಹುರಿಗಡಲೆಯನ್ನು ನಿತ್ಯವೂ ಸೇವಿಸಿ.

- Advertisement -

Leave A Reply

Your email address will not be published.