The news is by your side.

ರಾಜಾಪೂರ, ಖನಗಾಂವ ಸೇರಿ ಗೋಕಾಕ ತಾಲೂಕಿನಲ್ಲಿ 21 ಪಾಸಿಟಿವ್ ಪತ್ತೆ

ಗೋಕಾಕ: ತಾಲೂಕಿನಲ್ಲಿ ಮತ್ತೇ ಕರೋನಾ ಸೋಂಕು ಏರಿಕೆಯಾಗುತ್ತಿದ್ದು, ಗೋಕಾಕ 2 ಹಾಗೂ ತಾಲೂಕಿನ ಇನ್ನಿತರ ಗ್ರಾಮಗಳಲ್ಲಿ 6 ಮತ್ತು ಕ್ಷೀಪ್ರ ಪರೀಕ್ಷೆಯಲ್ಲಿ 15 ಸೇರಿ ಒಟ್ಟು 21 ಸೋಂಕಿತರು ಶನಿವಾರದಂದು ಪತ್ತೆಯಾಗಿದ್ದಾರೆ.

ತಾಲೂಕಿನ ರಾಜಾಪೂರ ಗ್ರಾಮದ ದಂಪತಿಗಳಿಗೆ, ಯಾದವಾಡ ಗ್ರಾಮದ 55 ವರ್ಷದ ವ್ಯಕ್ತಿ, ಖನಗಾಂವ ಗ್ರಾಮದ 70 ವರ್ಷದ ವೃದ್ಧರೊರ್ವರಿಗೆ ಕರೋನಾ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ನಗರ ಹಾಗೂ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 100 ಕ್ಕೂ ಹೆಚ್ಚು ಜನರಿಗೆ ಕರೋನಾ ಕ್ಷೀಪ್ರ ಪರೀಕ್ಷೆ ನಡೆಸಲಾಗಿದ್ದು ಅದರಲ್ಲಿ 15 ಜನರಿಗೆ ಸೋಂಕು ದೃಢಪಟ್ಟಿದೆ. ಪ್ರತಿದಿನ ನಗರ ಹಾಗೂ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 100 ಜನರಿಗೆ ಕರೋನಾ ಕ್ಷೀಪ್ರ ಪರೀಕ್ಷೆ ನಡೆಸಲು ಇಲಾಖೆಯಿಂದ ಎಲ್ಲ ರೀತಿಯ ತಯಾರಿ ನಡೆಸಲಾಗುತ್ತಿದೆ. ವರದಿಗಾಗಿ ಕಾಯುವ ಮುಂಚೆ ಕರೋನಾ ಕ್ಷೀಪ್ರ ವರದಿ ನೆರವಾಗಲಿದ್ದು ಸೋಂಕಿತರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುವದು ಎಂದು ಡಾ. ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ.

- Advertisement -

Leave A Reply

Your email address will not be published.