The news is by your side.

20 ಕೋಟಿ ವೆಚ್ಚದ ಕಾಮಗಾರಿ ಆರಂಭ

ಗೋಕಾಕ: ಗೋಕಾಕ ಮತಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ ಪಡಿಸಲು 6 ಕೋಟಿ ಹಾಗೂ ಚಿಕ್ಕ ನೀರಾವರಿ ಇಲಾಖೆಯಿಂದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗಳ 14 ಕೋಟಿ ಸೇರಿ ಒಟ್ಟು 20 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಪ್ರಾರಂಭವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಲೋಕೋಪಯೋಗಿ ಇಲಾಖೆಯಿಂದ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಪಡಿಸಲು ಶಿಂಗಳಾಪುರ 20 ಲಕ್ಷ, ಠಕ್ಕೆ 25 ಲಕ್ಷ, ಶಿಂಧಿಕುರಬೇಟ 30 ಲಕ್ಷ, ಧುಪದಾಳ 25 ಲಕ್ಷ, ಮಮದಾಪೂರ 20 ಲಕ್ಷ, ಮಮದಾಪೂರ 15 ಲಕ್ಷ, ಮಕ್ಕಳಗೇರಿ 20 ಲಕ್ಷ, ಹೂಲಿಕಟ್ಟಿ 20 ಲಕ್ಷ, ಅಕ್ಕತಂಗೇರಹಾಳ 20 ಲಕ್ಷ, ಅಂಕಲಗಿ 40 ಲಕ್ಷ, ಕುಂದರಗಿ 40 ಲಕ್ಷ ರೂಪಾಯಿ ಸೇರಿ ಒಟ್ಟು 6 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳು ಪ್ರಾರಂಭವಾಗಿವೆ.

ಚಿಕ್ಕ ನೀರಾವರಿ ಇಲಾಖೆಯಿಂದ ಬೆಣಚಿನಮರಡಿ 1.80, ಗುದನಟ್ಟಿ 1.50, ಕೈತನಾಳ ಹೊಸುರ 2.00, ಅಕ್ಕತಂಗೇರಹಾಳ 2.00, ಸುಲಧಾಳ 2.00, ದಾಸನಟ್ಟಿ 2.00, ಹೀರೆನಂದಿ 1.50, ಮಕ್ಕಳಗೇರಿ (ಹಣಮಾಪುರ) 2.00 ಕೋಟಿ ರೂಪಾಯಿ ಸೇರಿ ಒಟ್ಟು 14 ಕೋಟಿ ರೂಪಾಯಿಗಳು ವೆಚ್ಚದಲ್ಲಿ ಕಾಮಗಾರಿಗಳು ಪ್ರಾರಂಭಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

 

- Advertisement -

Leave A Reply

Your email address will not be published.