The news is by your side.

ರವಿವಾರ ಗೋಕಾಕ ತಾಲೂಕಿನಲ್ಲಿ ಸಂಪೂರ್ಣ ಸೀಲ್ ಡೌನ್

ಗೋಕಾಕ: ರಾಜ್ಯ ಸರ್ಕಾರದ ಆದೇಶ ಹಿನ್ನಲೆ ತಾಲೂಕಿನಾಧ್ಯಂತ ರವಿವಾರ ಸಂಪೂರ್ಣ ಸೀಲ್ ಡೌನ್ ಇರುತ್ತದೆ ಎಂದು ತಹಶಿಲ್ದಾರ ಪ್ರಕಾಶ ಹೊಳೆಪ್ಪಗೊಳ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕರೋನಾ ಸೋಂಕು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನಲೆ ಸರಕಾರದ ಮಾರ್ಗಸೂಚಿ ಅನ್ವಯ ರವಿವಾರ ಸಂಪೂರ್ಣ ಲಾಕ್ ಡೌನ್ ಮತ್ತು ಪ್ರತಿದಿನ ರಾತ್ರಿ 8.00 ಗಂಟೆ ಬೆಳಿಗ್ಗೆ 5 ಗಂಟೆಯ ವರೆಗೆ ಕಫ್ರ್ಯೂ ಜಾರಿ ಇರುತ್ತದೆ. ಈ ಅವಧಿಯಲ್ಲಿ ಅವಶ್ಯಕ ಸೇವೆ ಗಳಿಗೆ ನಿಭರ್ಂಧ ಇರುವುದಿಲ್ಲ. ಅನವಶ್ಯಕ ಜನ ಸಂಚಾರ, ಅಂಗಡಿ ಮುಂಗಟ್ಟುಗಳು, ವ್ಯಾಪಾರ ವಹಿವಾಟುಗಳು ಇತ್ಯಾದಿ ಎಲ್ಲಾ ಚಟುವಟಿಕೆಗಳಿಗೆ ನಿಬರ್ಂಧಿಸಲಾಗಿದೆ ಎಂದು ತಹಶಿಲ್ದಾರ ತಿಳಿಸಿದ್ದಾರೆ.

- Advertisement -

Leave A Reply

Your email address will not be published.