The news is by your side.

ಬೆಳಗಾವಿ ಜಿಲ್ಲೆಗೆ ಆಘಾತ; ಇಂದು 300 ರ ಗಡಿ ದಾಟಿತು ಸೋಂಕು

ಬೆಳಗಾವಿ, ೨೫- ಮಾರಕ ಕೊರೋನಾ ಸೋಂಕು ಬೆಳಗಾವಿ ಜೆಲ್ಲೆಯಲ್ಲಿ ಶನಿವಾರ ಒಂದೇ ದಿನ 341 ಜನರನ್ನು ಆವರಿಸಿ, ಐದು ಜನರನ್ನು ಬಲಿಪಡೆದಿದೆ.

ಸೋಂಕು ಕಂಡು ಬಂದಂದಿನಿಂದ ಇಷ್ಟು ತೀವ್ರವಾಗಿ ಎಂದೂ ಬಾಧಿಸಿರದ ಸೋಂಕು ತನ್ನ ಹಿಂದಿನ ಎಲ್ಲ ದಾಖಲೆಗಳನ್ನೂ ಶನಿವಾರ ಮುರಿದು ಜಿಲ್ಲೆಯ ಪ್ರತಿ ಪ್ರದೇಶ ಆವರಿಸಿಕೊಂಡಿದೆ.

ರಾಜ್ಯದಲ್ಲಿ ಇಂದು 5072 ಜನರಿಗೆ ಕೊರೋನಾ ಸೊಂಕು ತಗುಲಿದ್ದು ,72 ಜನರು ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 341 ಜನರಿಗೆ ಸೊಂಕು ತಗುಲಿದ್ದು, 5 ಜನರು ಸಾವನ್ನಪ್ಪಿದ್ದಾರೆ.

ಬೆಳಗಾವಿ ನಗರ, ತಾಲೂಕು ಹಾಗು ಅಥಣಿ ತಾಲೂಕು ಅಲ್ಲದೇ ಸಂಪೂರ್ಣ ಜಿಲ್ಲೆಯನ್ನೇ ಆವರಿಸಿಕೊಂಡಿದೆ. ಬೆಳಗಾವಿ ನಗರದ ಪ್ರತಿ ವಸತಿ ಪ್ರದೇಶಕ್ಕೂ ಸೋಂಕು ಆವರಿಸಿಕೊಂಡಿದ್ದು, ಎಲ್ಲೆಲ್ಲೂ ರಸ್ತೆ ಬಂದ್ ಮಾಡಿ ಬ್ಯಾರಿಕೇಡ್ ಹಾಕಿ ಪ್ರದೇಶಗಳನ್ನು ಲಾಕ್ ಮಾಡಲಾಗಿದೆ.

ನಿತ್ಯದಂತೆ ಇಂದೂ ಬೆಂಗಳೂರು ತೀವ್ರವಾಗಿ ಬಾಧಿತವಾಗಿದ್ದು ಬೆಂಗಳೂರು ನಗರದಲ್ಲಿ 2036 ಸೋಂಕು ಕಂಡು ಬಂದಿವೆ. ಬಳ್ಳಾರಿ 222, ದಕ್ಷಿಣ ಕನ್ನಡ 218, ಮೈಸೂರು 187, ಕಲಬುರಗಿ ಮತ್ತು ಧಾರವಾಡ ತಲಾ -183, ಉಡುಪಿ 182, ವಿಜಯಪುರ 175, ಉತ್ತರ ಕನ್ನಡ 155, ಬೆಂಗಳೂರು ಗ್ರಾಮಾಂತರ 154, ಹಾಸನ 151, ಚಿಕ್ಕಬಳ್ಳಾಪುರ 101, ದಾವಣಗೆರೆ 79, ಯಾದಗಿರಿ , ರಾಯಚೂರು ಮತ್ತು ಕೋಲಾರ ತಲಾ 68 ಬೀದರ 62, ಗದಗ 61, ಮಂಡ್ಯ 60, ಬಾಗಲಕೋಟ 57, ಶಿವಮೊಗ್ಗ ಮತ್ತು ಚಿಕ್ಕಮಗಳೂರು ತಲಾ 42, ಕೊಪ್ಪಳ 31, ತುಮಕೂರು 27, ಚಾಮರಾಜನಗರ 22, ರಾಮನಗರ 20, ಚಿತ್ರದುರ್ಗ 16, ಹಾಗು ಕೊಡಗು ಜಿಲ್ಲೆಯಲ್ಲಿ 9 ಜನರಿಗೆ ಕೊರೋನಾ ಸೊಂಕು ತಗುಲಿದೆ.

- Advertisement -

Leave A Reply

Your email address will not be published.