The news is by your side.

ಪಿಯು ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆದಿದ್ದ ಹರ್ಷಕ್ಕೆ ಪಾರ್ಟಿ ನೀಡಿ ಬರುತಿದ್ದ ಯುವಕ ಅಪಘಾತಕ್ಕೆ ಬಲಿ

 


ಬೆಳಗಾವಿ 25 : ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಖುಷಿಯಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಮರಳುತ್ತಿದ್ದ ಯುವಕ ರಸ್ತೆ ಅಪಘಾತದಲ್ಲಿ ಸಾವನ್ನಪಿದ್ದಾನೆ. ಈ ದುರ್ಘಟನೆ ಬೆಳಗಾವಿ-ಜಾಂಬೋಟಿ ಮಧ್ಯೆ ಶನಿವಾರ ಸಾಯಂಕಾಲ ಸಂಭವಿಸಿದೆ.

ಬೆಳಗಾವಿ ತಾಲೂಕು ಬೆಳವಟ್ಟಿ ಗ್ರಾಮದ ರೋಹಿತ್ ನಾರಾಯಣ ಚಾಂದಿಲ್ಕರ್ ಇತ್ತೀಚಿಗೆ ಜರುಗಿದ್ದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದ, ಆ ಖುಷಿಯ ಹಿನ್ನಲೆಯಲ್ಲಿ ತನ್ನ ಸ್ನೇಹಿತರಿಗೆ ಖಾನಾಪುರ ತಾಲೂಕಿನ ಜಾಂಬೋಟಿ ಬಳಿಯ ರೆಸಾರ್ಟ್ ಒಂದರಲ್ಲಿ ಪಾರ್ಟಿ ನೀಡಿದ್ದ. ಮಧ್ಯಾಹ್ನ ರೆಸಾರ್ಟ್ ಗೆ ತಲುಪಿದ್ದ ಸ್ನೇಹಿತರು ಪಾರ್ಟಿ ಮಾಡಿ ತಮ್ಮ ತಮ್ಮ ಬೈಕ್ ಗಳ ಮೇಲೆ ಹಿಂದಿರುಗಿ ಬರುತಿದ್ದಾಗ ರೋಹಿತ್ ಇದ್ದ ಬೈಕ್ ಎದುರಿನಿಂದ ಬರುತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ತಲೆಗೆ ತೀವ್ರವಾದ ಪೆಟ್ಟು ಬಿದ್ದಿದರಿಂದ ರೋಹಿತ್ ಸ್ಥಳದಲ್ಲೇ ಅಸುನೀಗಿದ, ಅವನೊಂದಿಗೆ ಅದೇ ಬೈಕ್ ನಲ್ಲಿದ್ದ ಗಣೇಶ್ ಚೌಗಲೆ ಹಾಗು ಅಮರ್ ನಲವಡೆ ಗಾಯಗೊಂಡ್ದಿದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಲಾರಿ ಗೋವಾಗೆ ಸರಕು ಸಾಗಿಸುತಿತ್ತು. ಖಾನಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Leave A Reply

Your email address will not be published.