The news is by your side.

ಸ್ವೀಟ್ ಕಾರ್ನ್ ತಿನ್ನೋದರಿಂದ ಆಗುವ ಉಪಯೋಗಗಳ ಬಗ್ಗೆ ಹೇಳ್ತೇವೆ ಒಮ್ಮೆ ನೋಡಿ

ಸ್ವೀಟ್ ಕಾರ್ನ್ ಎಂದರೆ ಎಲ್ಲರಿಗೂ ಇಷ್ಟ. ಆರೋಗ್ಯಕರ ಹಾಗೂ ರುಚಿಕರವಾದ ಸ್ನ್ಯಾಕ್ಸ್ ಎಂದರೆ ಅದು ಸ್ವೀಟ್ ಕಾರ್ನ್. ಮಳೆಗಾಲದಲ್ಲಿ ಈ ಸ್ವೀಟ್ ಕಾರ್ನ್ ಗೆ ಬೇಡಿಕೆ ಹೆಚ್ಚು. ಮಳೆಗಾಲದಲ್ಲಿ ಈ ಬಿಸಿ ಬಿಸಿ ಸ್ವೀಟ್ ಕಾರ್ನ್ ತಿನ್ನುವುದೆದಂದರೆ ಮಕ್ಕಳಿಗೆ ಅಚ್ಚುಮೆಚ್ಚು.

ಸಂಜೆ ಹಸಿವಾದಾಗ ಸ್ವೀಟ್ ಕಾರ್ನ್ ತಿನ್ನುವುದು ಉತ್ತಮ. ಬೇರೆಲ್ಲಾ ಫಾಸ್ಟ್ ಫುಡ್ ತಿನ್ನುವುದಕ್ಕಿಂತ ಕಾರ್ನ್ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ನೀವು ಹೊರಗೆ ಹೋಗಿ ಕಾರ್ನ್ ತಿನ್ನುವುದಕ್ಕಿಂತ ಮನೆಯಲ್ಲೇ ಬೇಯಿಸಿ ತಿನ್ನುವುದು ಉತ್ತಮ. ಕಾರ್ನ್ ಗೆ ಹಾಕುವ ಉಪ್ಪು, ಖಾರ ಮತ್ತು ಬೆಣ್ಣೆ ಬಳಸುವುದನ್ನು ಸ್ವಲ್ಪ ಕಡಿಮೆ ಮಾಡಿದರೆ ಒಳ್ಳೆಯದು. ಹಾಗೇ ಕಾರ್ನ್ ಅನ್ನು ಸುಟ್ಟು ಕೂಡ ತಿನ್ನಬಹುದು.

ಸ್ವೀಟ್ ಕಾರ್ನ್ ಗೆ ಉಪ್ಪು, ಖಾರ, ಬೆಣ್ಣೆ ಹಾಕುವ ಬದಲು ಕಪ್ಪು ಉಪ್ಪು, ಕಾಳುಮೆಣಸಿನ ಪುಡಿ, ತುಪ್ಪ ಸ್ವಲ್ಪ ನಿಂಬೆರಸವನ್ನು ಬಳಸಿ. ಇದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಪಲಾವ್, ರೈಸ್‌ಭಾತ್, ಬಜ್ಜಿ ಹಾಗೇ ಕೋಸಂಬರಿಗಳಲ್ಲಿ ಕಾರ್ನ್ ಅನ್ನು ಬಳಸುತ್ತೇವೆ. ನಾವು ಯಾವಾಗ ಕಾರ್ನ್ ನ್ನು ಕರಿದ ತಿಂಡಿಗಳಲ್ಲಿ, ಹೆಚ್ಚು ಬೇಯಿಸುವ ಅಡುಗೆಗಳಲ್ಲಿ ಬಳಸುತ್ತೇವೋ ಆಗ ಕಾರ್ನ್ ತನ್ನ ಸತ್ವ ಅಥವಾ ರುಚಿಯನ್ನು ಕಳೆದುಕೊಳ್ಳುತ್ತದೆ. ಹೀಗೆ ಬಳಸುವುದರಿಂದ ಏನು ಉಪಯೋಗವೂ ಇಲ್ಲ.

ನೀವು ಹೆಚ್ಚು ಕಾರ್ನ್ ಸೇವಿಸಿದರೆ ನಿಮ್ಮ ದೇಹದಲ್ಲಿನ ಬೊಜ್ಜು ಕರಗುತ್ತದೆ. ನಿಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನ ಪ್ರಮಾಣ ಕಡಿಮೆ ಮಾಡುತ್ತದೆ. ಅನಿಮಿಯಾ ಅಥವಾ ರಕ್ತದ ಕೊರತೆಯನ್ನು ಕಡಿಮೆ ಮಾಡುವುದರಲ್ಲಿ ಸಹಕರಿಸುತ್ತದೆ:

ಸ್ವೀಟ್ ಕಾರ್ನ್ನಲ್ಲಿ ವಿಟಮಿನ್ ಬಿ12 ಹಾಗೂ ಕಬ್ಬಿಣಾಂಶ ಇದೆ. ಇದರಿಂದ ದೇಹದಲ್ಲಿನ ರಕ್ತದ ಕೊರತೆ ಕಡಿಮೆಯಾಗುತ್ತದೆ. ಸ್ವೀಟ್ ಕಾರ್ನ್ ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು ಜೊತೆಗೆ ಕಡಿಮೆ ಮಾಡಿಕೊಳ್ಳಬಹುದು. ಹಾಗೇ ಡಯಟ್ ಮಾಡುವವರು ಇದನ್ನು ತಿನ್ನುವುದರಿಂದ ಫಿಟ್ ಆಗಿರಬಹುದು. ಡಯಟ್ ಮಾಡುವವರು, ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ವಾರಕ್ಕೆ 2 ರಿಂದ 3 ಬಾರಿ ಸ್ವೀಟ್ ಕಾರ್ನ್ ತಿನ್ನುವುದು ಒಳ್ಳೆಯದು. ಕಾರ್ನ್ ತಿನ್ನಲು ಇಚ್ಛಿಸುವವರು ಒಂದು ಪಾನ್‌ಗೆ ಜೀರಿಗೆ, ಕಡಲೆಕಾಯಿ ಹಾಕಿ ಹುರಿದು, ನಂತರ ಇದಕ್ಕೆ ಬೇಯಿಸಿದ ಕಾರ್ನ್ ಅನ್ನು ಸೇರಿಸಿ. ತದನಂತರ ಪಾನ್‌ಗೆ ಸಣ್ಣಗೆ ತುರಿದ ಸೌತೇಕಾಯಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಸ್ವಲ್ಪ ಟೊಮೇಟೋ (ಪ್ರತಿ ದಿನ ಟೊಮೇಟೋ ಬಳಸುವುದು ಉತ್ತಮವಲ್ಲ), ನಿಂಬೆರಸ, ಕಪ್ಪು ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಹುರಿದು ತಿನ್ನಿಯಿರಿ.

ತೂಕ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ವಾರಕ್ಕೆ ನಾಲ್ಕು ಬಾರಿ ಕಾರ್ನ್ ಬೇಯಿಸಿ ಅದಕ್ಕೆ ತುಪ್ಪ ಹಾಕಿಕೊಂಡು ತಿನ್ನುವುದರಿಂದ ಆರೋಗ್ಯಯುತವಾಗಿ ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಹಾಗೇ ಮಿತಿಯನ್ನು ಮೀರಿ ಕಾರ್ನ್ ತಿನ್ನುವುದೂ ಆರೋಗ್ಯಕ್ಕೆ ಒಳ್ಳೆಯದಲ್ಲ.

- Advertisement -

Leave A Reply

Your email address will not be published.