The news is by your side.

ಮೀನು ಮುಟ್ಟಿದ ಬಳಿಕ ಕೈ ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿ ವೈದ್ಯರ ಮಾತು ಕೇಳಿ ದಿಗ್ಬ್ರಮೆಗೋಂಡ!

ಬೀಜಿಂಗ್​: ಇಡೀ ವಿಶ್ವದಲ್ಲಿ ಮೀನು ಮಾಂಸ ಪ್ರಿಯರೇನು ಕಮ್ಮಿ ಇಲ್ಲ. ಜಗತ್ತಿನೆಲ್ಲೆಡೆ ಮೀನು ಉತ್ಪಾದನೆಯೇ ಒಂದು ಪ್ರಮುಖ ಆರ್ಥಿಕತೆಯ ಭಾಗವಾಗಿದೆ. ಮೀನು ಮಾಂಸದಲ್ಲಿ ರುಚಿಯ ಜತೆಗೆ ಆರೋಗ್ಯ ವೃದ್ಧಿಕಾರಕ ಅಂಶಗಳಿರುವುದು ಎಷ್ಟು ನಿಜವೋ? ಅಷ್ಟೇ ಅಪಾಯಾಕಾರಿ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಮೀಮೂಳೆಗಳಿಂದ ಕೈಗೆ ಚುಚ್ಚಿಸಿಕೊಂಡ ಚೀನಾದ ವ್ಯಕ್ತಿಯೊಬ್ಬನಿಗೆ ಗಂಭೀರವಾದ ಉರಿಯೂತ ಕಾಣಿಸಿಕೊಂಡಿದ್ದು, ಇದೀಗ ಆತನ ಕೈಯನ್ನು ಕತ್ತರಿಸಬೇಕಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಚೀನಾದ 60 ವರ್ಷದ ಸಮುದ್ರ ಆಹಾರ ಪ್ರಿಯನೊಬ್ಬ ಇತ್ತೀಚೆಗೆ ಮೀನನ್ನು ಮನೆಗೆ ತಂದಿದ್ದ. ಯಾವುದೇ ಗ್ಲೌಸ್​ ಧರಿಸದೇ ಬರಿಗೈಯಿಂದ ಮೀನನ್ನು ಕತ್ತರಿಸುವಾಗ ಆತನ ಕೈ ಬೆರಳುಗಳಿಗೆ ಮೂಳೆಗಳು ಚುಚ್ಚಿದ್ದವು. ಇದರಿಂದ ರಕ್ತವಾಗಲಿ ಅಥವಾ ಕಾಣುವಂತಹ ಗಾಯವಾಗಲಿ ಆಗಿರಲಿಲ್ಲ. ಕೆಲ ದಿನಗಳಲ್ಲಿ ನೋವು ಕಾಣಿಸಿಕೊಂಡು ವೈದ್ಯರ ಬಳಿ ಹೋದಾಗ ಆತ ಅಕ್ಷರಶಃ ಶಾಕ್​ ಆಗಿದ್ದಾನೆ. ಆತನ ಕೈಗೆ ಮಾರಕ ಬ್ಯಾಕ್ಟೀರಿಯಾ ಸೋಂಕು ತಗುಲಿರುವುದು ಗೊತ್ತಾಗಿದೆ. ಇಂತಹ ಬ್ಯಾಕ್ಟಿರಿಯಾಗಳು ಸಾಮಾನ್ಯವಾಗಿ ಬೆಚ್ಚನೆಯ ಸಮುದ್ರ ನೀರಿನಲ್ಲಿ ಜೀವಿಸುತ್ತವೆ ಮತ್ತು ಮಾಂಸವನ್ನು ತಿನ್ನುವ ಬ್ಯಾಕ್ಟೀರಿಯಾಗಳಾಗಿವೆ ಎಂದು ವೈದ್ಯರು ಹೇಳಿದ್ದಾರೆ.

ಚನಾ ವ್ಯಕ್ತಿಗೆ ವೈದ್ಯರು ತಕ್ಷಣ ಚಿಕಿತ್ಸೆಯನ್ನು ನೀಡಿದ್ದಾರೆ. ಆದರೂ, ಆತನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವುದರಿಂದ ಕೈಯನ್ನು ಕತ್ತರಿಸಬೇಕಾಗುತ್ತದೆ ಎಂದು ಚೀನಾದ ವೈದ್ಯರು ಹೇಳಿದ್ದಾರೆ. ಅಂದಹಾಗೆ ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾದ ವ್ಯಕ್ತಿಯನ್ನು ವ್ಯಾಂಗ್​ ಎಂದು ಗುರುತಿಸಲಾಗಿದೆ. ಜುಲೈ 17ರಂದು ತನಗೆ ಅರಿವಿಲ್ಲದಂತೆ ಆತ ಗಾಯಗೊಂಡಿದ್ದ. ಅದಕ್ಕೂ ಮುನ್ನ ಚೀನಾದ ಮೀನುಗಳಲ್ಲಿ ಪ್ರಖ್ಯಾತವಾಗಿರುವ ಮೀನೊಂದನ್ನು ಕೊಂಡು ತಂದಿದ್ದ. ಅದನ್ನು ಶುಚಿಗೊಳಿಸುವಾಗ ಆತನ ಎಡಗೈನ ಉಂಗುರ ಬೆರಳು ಹಾಗೂ ಕಿರುಬೆರಳಿಗೆ ಮೀನು ಮೂಳೆ ಚುಚ್ಚಿತ್ತಂತೆ. ಆದರೆ, ರಕ್ತ ಹಾಗೂ ಗಾಯವಾಗಿರುವುದನ್ನು ಕಾಣದಿದ್ದಾಗ ಯಾವುದೇ ಯೋಚನೆ ಮಾಡದೇ ಮೀನು ಶುಚಿ ಮಾಡಿ, ಅಡುಗೆ ಮಾಡಿ ಸೇವಿಸಿದ್ದಾನೆ.

ಮಾರನೆ ದಿನ ಬೆಳಗ್ಗೆ ಆತನ ಕೈಗಳಲ್ಲಿ ಸಣ್ಣ ಗುಳ್ಳೆಗಳು ಏಳಲು ಆರಂಭಿಸಿವೆ. ಮಧ್ಯಾಹ್ನದೊತ್ತಿಗೆ ಆತನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದಾಗ ವೈದ್ಯರ ಮೊರೆ ಹೋಗಿದ್ದಾನೆ. ಮೊದಲ ಸಣ್ಣ ಕ್ಲೀನಿಕ್​ನಲ್ಲಿ ವ್ಯಾಂಗ್​ ದಾಖಲಾಗಿದ್ದಾನೆ. ಈ ವೇಳೆ ಗುಳ್ಳೆಗಳು ಆತನ ತೊಳಿನವರೆಗೂ ಹರಡಿರುವುದನ್ನು ಕಂಡು ಗಾಬರಿಯಾಗುತ್ತಾನೆ. ಪರೀಕ್ಷಿಸಿದ ವೈದ್ಯರು ವ್ಯಾಂಗ್​​ಗೆ ವೈಬ್ರಿಯೋ ವಲ್ನಿಫಿಕಸ್ ಎಂಬ ಮಾರಕ ಬ್ಯಾಕ್ಟೀರಿಯಾ ಸೋಂಕು ತಗುಲಿರುವುದಾಗಿ ಹೇಳುತ್ತಾರೆ. ಈ ರೀತಿಯ ಬ್ಯಾಕ್ಟೀರಿಯಾ ಶೇ 33 ರಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತದಂತೆ.

ಬಳಿಕ ವ್ಯಾಂಗ್​ನನ್ನು ಹೆಚ್ಚಿನ ಚಿಕಿತ್ಸೆಗೆ ಗುಯಿಜೌ ಪ್ರಾಂತೀಯ ಪೀಪಲ್ಸ್​ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಅಷ್ಟರಲ್ಲಾಗಲೇ ಆತನ ಕಂಕುಳಿನವರೆಗೂ ಸೋಂಕು ಹರಡಿರುತ್ತದೆ. ಈ ವೇಳೆ ಆ್ಯಂಟಿ ಬಯಾಟಿಕ್​ ಚಿಕಿತ್ಸೆ ನೀಡುವ ವೈದ್ಯರು ಸೋಂಕು ಅಂಗಾಗಳಿಗೆ ಹರಡದಂತೆ ತಡೆಯುತ್ತಾರೆ. ಆದರೆ, ಆತನ ಕೈನಲ್ಲಿರುವ ಸೋಂಕು ಮಾತ್ರ ಯಾವುದೇ ಚೇತರಿಕೆ ಲಕ್ಷಣ ಕಾಣುವುದಿಲ್ಲ. ಅಲ್ಲದೆ, ಕೈನ ಭಾವನೆಗಳನ್ನೇ ಆತ ಕಳೆದುಕೊಂಡು ಬಿಡುತ್ತಾನೆ.

ಹೀಗಾಗಿ ಆತನ ಪರಿಸ್ಥಿತಿ ಮತ್ತಷ್ಟು ಹದಗೆಡದಿರಲು ಆತನ ಕೈ ಕತ್ತರಿಸುವ ನಿರ್ಧಾರಕ್ಕೆ ಬಂದಿರುವ ವೈದ್ಯರು ಸದ್ಯ ವ್ಯಾಂಗ್​ನನ್ನು ನಿಗಾದಲ್ಲಿಟ್ಟಿದ್ದಾರೆ. ಆತನ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಿ ಯಾವುದೇ ಧನಾತ್ಮಕ ಬದಲಾವಣೆಯಾಗದೇ ಮತ್ತಷ್ಟು ಅಪಾಯಾಕಾರಿ ಎಂದು ಕಂಡುಬಂದಲ್ಲಿ ಕೈಯನ್ನು ಕತ್ತರಿಸಬೇಕಾಗಬಹುದು ಎಂದಿದ್ದಾರೆ.

- Advertisement -

Leave A Reply

Your email address will not be published.