The news is by your side.

ಕೆಪಿಸಿಸಿ ಅಕಾಡೆಮಿ ಅಧ್ಯಕ್ಷರಾಗಿ ಸತೀಶ್ ಜಾರಕಿಹೊಳಿ ನೇಮಕ

ಬೆಂಗಳೂರು:: ರಾಜ್ಯ ಕಾಂಗ್ರೆಸ್ ಘಟಕದ ರಾಜಕೀಯ ನಾಯಕತ್ವ ಮತ್ತು ಆಡಳಿತ ಅಕಾಡೆಮಿಯ ಅಧ್ಯಕ್ಷರಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ನೇಮಕ ಮಾಡಿದ್ದಾರೆ.

ಡಿ.ಕೆ.ಶಿವುಕುಮಾರ ಅವರ ಜೊತೆ ಈ ಸಮಿತಿ ಮೇಲೆ ಮಹತ್ವದ ಜವಾಬ್ದಾರಿ ವಹಿಸಿಲಾಗಿದೆ.ರಾಜಕೀಯ ನಾಯಕತ್ವ ಮತ್ತು ಪಕ್ಷದ ಇತಿಹಾಸ, ನೀತಿ ಮತ್ತು ಕಾರ್ಯಕ್ರಮಗಳನ್ನು ಕೇಡರ್ ಮಟ್ಟದಿಂದಲೇ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಈ ಕಮಿಟಿ ಮಾಡಲಾಗಿದ್ದು ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ನೂತನ ಕಮಿಟಿಯನ್ನು ನೇಮಕ ಮಾಡಲಾಗಿದೆ.

ಅಕಾಡೆಮಿಯ ಸದಸ್ಯರಾಗಿ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ, ಕೃಷ್ಣ ಬೈರೇಗೌಡ, ಯುಟಿ ಖಾದರ್, ಶರಣಪ್ರಕಾಶ ಪಾಟೀಲ, ಡಿ.ಕೆ. ಸುರೇಶ, ಎಲ್. ಹನುಮಂತಯ್ಯ, ಸಯ್ಯದ ನಾಸಿರ ಹುಸೇನ್, ಕೆ.ಇ. ರಾಧಾಕೃಷ್ಣ, ಸೌಮ್ಯ ರೆಡ್ಡಿ, ಅಶೋಕ ಕುಮಾರ ಮತ್ತು ಸಂಚಾಲಕರಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಪಿ.ವಿ. ಮೋಹನ್ ಮತ್ತು ನಿಖಿತ್ ರಾಜ್ ಅವರನ್ನು ನೇಮಕಮಾಡಲಾಗಿದೆ.

- Advertisement -

Leave A Reply

Your email address will not be published.