The news is by your side.

ಬೆಳಗಾವಿ ನಗರ ಹಾಗೂ ತಾಲೂಕಿನಲ್ಲಿ 182 ಮಂದಿಗೆ ಕೊರೊನಾ!!

ಬೆಳಗಾವಿ:; ಜಿಲ್ಲೆಯಲ್ಲಿ ಬುಧವಾರ ಬರೊಬ್ಬರಿ 293 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿಯೇ 182 ಪಾಸಿಟಿವ್ ಕೇಸ್‍ಗಳು ದೃಢಪಟ್ಟಿವೆ. ಇನ್ನು ಗೋಕಾಕ್ ತಾಲೂಕಿನಲ್ಲಿ 25, ಬೈಲಹೊಂಗಲ ತಾಲೂಕಿನಲ್ಲಿ 24, ಚಿಕ್ಕೋಡಿ ತಾಲೂಕಿನಲ್ಲಿ 21, ಅಥಣಿ ತಾಲೂಕಿನಲ್ಲಿ 13, ಸವದತ್ತಿ ತಾಲೂಕಿನಲ್ಲಿ 10, ರಾಮದುರ್ಗ ತಾಲೂಕಿನಲ್ಲಿ 06, ರಾಯಬಾಗ್ ತಾಲೂಕಿನಲ್ಲಿ 04, ಹುಕ್ಕೇರಿ ತಾಲೂಕಿನಲ್ಲಿ 03, ಖಾನಾಪುರ ತಾಲೂಕಿನಲ್ಲಿ 03, ಧಾರವಾಡ ಜಿಲ್ಲೆಯ 3 ಸೋಂಕಿತರು ದೃಢಪಟ್ಟಿದ್ದಾರೆ.

ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಇಂದು ನಾಲ್ವರು ಮಹಾಮಾರಿ ಸೋಂಕಿಗೆ ಬಲಿಯಾಗಿದ್ದು. 70 ವರ್ಷದ ವೃದ್ಧೆ, 65 ವರ್ಷದ ವೃದ್ಧ, 70 ವೃದ್ಧ, 30 ವರ್ಷದ ವ್ಯಕ್ತಿ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮತ್ತಷ್ಟು ಕೊರೊನಾ ಆತಂಕ ಮೂಡಿದೆ.

Patient Details for 05.08.2020

- Advertisement -

Leave A Reply

Your email address will not be published.