ಬೆಳಗಾವಿ : ಖಾನಾಪುರ ತಾಲೂಕಿನಲ್ಲಿರುವ ಮಲಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಖಾನಾಪುರ ತಾಲೂಕಿನ ಯಡೋಗಾ ಹಾಗೂ ಚಾಪಗಾಂವಿ ಸಂಪರ್ಕಿಸುವ ಸೇತುವೆ ನೀರಿನ ರಭಸಕ್ಕೆ ಕುಸಿಯಲು ಆರಂಭಿಸಿದೆ.
ಈ ಸೇತುವೆಯನ್ನು ಕೇವಲ ಮೂರು ತಿಂಗಳ ಹಿಂದಷ್ಟೆ ನಿರ್ಮಾಣ ಮಾಡಲಾಗಿತ್ತು. ಮಲಪ್ರಭಾ ನದಿಗೆ ಕಟ್ಟಲಾಗಿರುವ ಈ ಸೇತುವೆ ಮೇಲೆ ಮೂರು ದಿನದ ಹಿಂದಷ್ಟೇ ನೀರು ಹರಿಯುತ್ತಿತ್ತು ಇದರಿಂದ ಯಡೋಗಾ ಹಾಗೂ ಚಾಪಗಾಂವಿ ಜನತೆಯಲ್ಲಿ ಆತಂಕ ನಿರ್ಮಾಣವಾಗಿತ್ತು, ಆದರೆ ಈಗ ಸೇತುವೆಯ ಒಂದು ಭಾಗ ಕುಸಿಯುತ್ತಿದೆ.
ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಯಡೋಗಾ ಹಾಗೂ ಚಾಪಗಾಂವಿ ಗ್ರಾಮದಲ್ಲಿ ಅಪಾರ ಪ್ರಮಾಣದ ಭತ್ತದ ಬೆಳೆಗಳು ನಾಶವಾಗಿವೆ. ರಸ್ತೆ ಮುಳುಗಡೆಯಿಂದ ಉಭಯ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಕೃಷಿ ಚಟುವಟಿಕೆಗೆ ಹೋಗಿರುವ ರೈತರು ಚಾಪಗಾಂವಿ ಹಾಗೂ ಯಡೋಗಾ ಗ್ರಾಮದಲ್ಲಿ ಸಿಲುಕಿಕೊಂಡಿದ್ದಾರೆ.
