The news is by your side.

ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಮಾಡಲು ಈ ಕಷಾಯ ಮಾಡಿ ಕುಡಿಯಿರಿ…!

ನಮಸ್ಕಾರ ಸ್ನೇಹಿತರೇ ಮಳೆಗಾಲದಲ್ಲಿ ಶೀತ ನೆಗಡಿ ಗಂಟಲು ಕೆರೆತ ಜ್ವರ ಹೀಗೆ ವೈರಲ್ ಇನ್ಫೆಕ್ಷನ್ ಗಳು ಆಗುತ್ತಿರುತ್ತವೆ. ಆದ್ದರಿಂದ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಈ ವೈರಲ್ ಇನ್ಫೆಕ್ಷನ್ ನಿಂದ ರಕ್ಷಿಸಿಕೊಳ್ಳಬಹುದು. ಇಂದಿನ ಲೇಖನದಲ್ಲಿ ಕೆಲವು ಟೀ ಅಥವಾ ಕಷಾಯವನ್ನು ಹೇಗೆ ಮಾಡುವುದೆಂದು ತಿಳಿಸಿಕೊಡುತ್ತೇವೆ.

ಈ ಕಷಾಯಗಳನ್ನು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ಯಾವುದೇ ವೈರಸ್ ಹಾಗೂ ಬ್ಯಾಕ್ಟೀರಿಯಾಗಳು ನಿಮ್ಮ ದೇಹವನ್ನು ಸೇರುವುದಿಲ್ಲ. ಹಾಗಾದರೆ ಪ್ರಾರಂಭಿಸೋಣ ಬನ್ನಿ. ಮೊದಲನೆಯದಾಗಿ ಜೀರಿಗೆ ಟೀ. ಇದನ್ನು ಮಾಡಲಿಕ್ಕೆ ಒಂದು ಲೋಟದಷ್ಟು ನೀರನ್ನು ಬಿಸಿ ಮಾಡಲು ಇಡೀ. ಕಾಲು ಚಮಚದಷ್ಟು ಮೆಂತ್ಯೆ ಕಾಳುಗಳು, ಅರ್ಧ ಚಮಚದಷ್ಟು ಜೀರಿಗೆ ಹಾಗೂ ಕೊತ್ತಂಬರಿ ಬೀಜಗಳನ್ನು ಹಾಕಿ ಈ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಿ.

ಜೀರಿಗೆ ದೇಹದ ತೂಕವನ್ನು ಕಡಿಮೆ ಮಾಡಲು ಹಾಗೂ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದು ಚೆನ್ನಾಗಿ ಕುದಿ ಬಂದ ನಂತರ ಇದನ್ನು ಲೋಟದಲ್ಲಿ ಸೋಸಿಕೊಂಡುಇದಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡಬಹುದು. ಎರಡನೆಯದಾಗಿ ತುಳಸಿ ಬ್ಲಾಕ್ ಪೆಪ್ಪರ್ ಟೀ. ಇದನ್ನು ಸಿದ್ದಪಡಿಸುವುದಕ್ಕೆ ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರು ಹಾಕಿಕೊಳ್ಳಿ. ಈ ನೀರಿಗೆ ಎರಡು ಕಾಳು ಮೆಣಸು ಒಂದು ಲವಂಗ ಹಾಗೂ ಮೂರರಿಂದ ನಾಲ್ಕು ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಇದನ್ನು ಸೋಸಿಕೊಂಡು ಕೊನೆಯದಾಗಿ ಜೇನುತುಪ್ಪವನ್ನು

ಬೆರೆಸಿ ಇದನ್ನು ಕುಡಿಯಬಹುದು. ಆದರೆ ಇಲ್ಲಿ ತುಳಸಿ ಎಲೆಗಳನ್ನು ಬಿಸಾಡುವ ಬದಲು ಅದನ್ನು ನೀವು ಜಗೆದು ತಿನ್ನಬಹುದು. ಇದು ವೈರಲ್ ಇನ್ಫೆಕ್ಷನ್ ವಿರುದ್ಧ ಹೋರಾಡಿ ದೇಹದಲ್ಲಿ ಇಮ್ಯುಣಿಟಿಯನ್ನು ಬೂಸ್ಟ್ ಮಾಡುತ್ತದೆ. ಇನ್ನು ಮೂರನೆಯ ಕಷಾಯ ಜಿಂಜರ್ ಟೀ. ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರು ಹಾಕಿಕೊಳ್ಳಿ. ಇದಕ್ಕೆ ಅರ್ಧ ಇಂಚು ಶುಂಠಿಯನ್ನು ಹಾಕಿಕೊಳ್ಳಿ. ನಂತರ ಇದರಲ್ಲಿ ಒಣ ಅರಿಶಿಣವನ್ನು ಸೇರಿಸಿಕೊಳ್ಳಿ. ಎರಡನ್ನೂ ಬೆರಿಸಿ ಈ ನೀರನ್ನು ಕುದಿಸಿಕೊಳ್ಳಿ. ಹಾಗೂ ಸೋಸಿಕೊಂಡು ಕುಡಿಯಿರಿ. ನಾಲ್ಕನೆಯದಾಗಿ ಸಿನೆಮನ್ ಟೀ ಅಥವಾ ದಾಲ್ಚಿನ್ನಿ ಕಷಾಯ.

ಇದನ್ನು ತಯಾರಿಸುವುದಕ್ಕೆ ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರನ್ನು ತೆಗೆದುಕೊಳ್ಳಿ. ಇದರಲ್ಲಿ ಅರ್ಧ ಇಂಚಿನಷ್ಟು ದಾಲ್ಚಿನ್ನಿಯನ್ನು ಹಾಕಿಕೊಳ್ಳಿ. ಒಂದು ಏಲಕ್ಕಿ ಹಾಗೂ ಒಂದು ಲವಂಗವನ್ನು ಇದರಲ್ಲಿ ಹಾಕಿ. ನಂತರ ಈ ನೀರನ್ನು 5 ರಿಂದ 7 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಿ. ನಂತರ ಇದನ್ನು ಸೋಸಿ ಬಿಟ್ಟು ಇದಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡಿ. ಈ ಕಷಾಯವನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಅಷ್ಟೇ ಅಲ್ಲದೇ ತೂಕವನ್ನು ಕಡಿಮೆ ಮಾಡಿಕೊಳ್ಳಲು ಹಾಗೂ ಹೃದಯ ರೋಗಗಳನ್ನು ಮತ್ತು ಅಪಾಯವನ್ನು ತಡೆಗಟ್ಟುತ್ತದೆ. ಜೊತೆಗೆ ದೇಹದಲ್ಲಿ ಸಕ್ಕರೆ ಅಂಶವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಕೊನೆಯದಾಗಿ ತುಳಸಿ ಟೀ. ಇದನ್ನು ಮಾಡುವುದಕ್ಕೆ ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು

ನೀರನ್ನು ಕುದಿಸಿಕೊಳ್ಳಿ. ಈ ನೀರು ಚೆನ್ನಾಗಿ ಕುದ್ದಿದ ನಂತರ ಇದರಲ್ಲಿ 5 ರಿಂದ 6 ತುಳಸಿ ಎಲೆಗಳನ್ನು ಹಾಕಿಕೊಳ್ಳಿ. ನಂತರ ಈ ನೀರನ್ನು 2 ನಿಮಿಷ ಕುದಿಸಿಕೊಂಡು ಈ ನೀರನ್ನು ನೀವು ಸೇವಿಸಬಹುದು. ಇದರಲ್ಲಿ ಜೇನುತುಪ್ಪವನ್ನು ಬಳಕೆ ಮಾಡಬಹುದು. ಹಾಗೂ ಇದರಲ್ಲಿರುವ ಈ ಎಲೆಗಳನ್ನು ಜಗೆದು ತಿನ್ನಬಹುದು.

ಸ್ನೇಹಿತರೇ ಈ ಐದು ಕಷಯಗಳು ಅಥವಾ ಟೀ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ನಿಮ್ಮ ದೇಹವನ್ನು ಆಂತರಿಕವಾಗಿ ಬಲಗೊಳಿಸುತ್ತದೆ. ಯಾವುದೇ ರೀತಿಯ ವೈರಸ್ ಹಾಗೂ ಬ್ಯಾಕ್ಟೀರಿಯಾ ನಿಮ್ಮ ದೇಹದಲ್ಲಿ ಸೇರಿಕೊಳ್ಳದಂತೆ ತಡೆಹಿಡಿಯುತ್ತದೆ. ಎಲ್ಲ ರೋಗಗಳಿಂದ ನಮ್ಮ ದೇಹಕ್ಕೆ ರಕ್ಷಾಕವಚವನ್ನು ಒದಗಿಸುತ್ತದೆ. ಮೇಲೆ ತಿಳಿಸಿರುವ ಎಲ್ಲ ಕಷಾಯವನ್ನು ಒಂದೇ ದಿನದಲ್ಲಿ ಒಟ್ಟಿಗೆ ಬಳಕೆ ಮಾಡಬಾರದು. ನಿತ್ಯವೂ ಒಂದೊಂದಾಗಿ ತಯಾರಿಸಿ ಉಪಯೋಗಿಸಬಹುದು.

Shree Panjurlli Fine Dine ADD

- Advertisement -

Leave A Reply

Your email address will not be published.