The news is by your side.

ಮಾರ್ಕಂಡೇಯ ನದಿ ಅಬ್ಬರ: ಪಾಶ್ಚಾಪೂರ ಸೇತುವೆ ಜಲಾವೃತ

ಬೆಳಗಾವಿ: ಮಾರ್ಕಂಡೇಯ ಜಲಾಶಯದಿಂದ ನೀರು ಬಿಡಲಾಗಿದ್ದು ಹಿಡಕಲ್ ಡ್ಯಾಂ, ಬೆಳಗಾವಿ ಮೊದಲಾದ ಕಡೆಗಳಿಗ ಸಂಪರ್ಕ ಕಲ್ಪಿಸುವ ಪಾಶ್ವಾಪೂರ ಗ್ರಾಮದ ಸೇತುವೆ ಸಂಪೂರ್ಣ ಮುಳುಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿದೆ.

ಪ್ರವಾಹದ ಮುನ್ನೆಚ್ಚರಿಕೆ ಕ್ರಮವಾಗಿ, ನದಿ ತೀರದಲ್ಲಿರುವ ಪಾಶ್ವಾಪೂರ, ಕುಂದರಗಿ , ಮಾವನೂರ, ಗೊಡಚಿನಮಲ್ಕಿ ಮುಂತಾದ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರಿಗೆ ಎಚ್ಚರಿಕೆಯಿಂದಿರಲು ಹಾಗೂ ಎತ್ತರದ ಸ್ಥಳಗಳಿಗ ಹೋಗಲು ಗ್ರಾಮ ಪಂಚಾಯಿತಿಗಳ ಮುಖಾಂತರ ಡಂಗುರ ಹಾಗೂ ಧ್ವನಿವರ್ಧಕ ಮೂಲಕ ಸೂಚನ ನೀಡಿಲಾಗಿದೆ. ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಪಾಶ್ವಪೂರ ಗ್ರಾಮದ ಸೇತುವೆಯು ಶಿಥಿಲಾವಸ್ಥೆಯಲ್ಲಿದೆ. ಪತ್ರಿ ವರ್ಷ ಮಳೆಗಾಲದ ಸಂದರ್ಭದಲ್ಲಿ ನಾಲ್ಕೈದು ಬಾರಿ ಜಲಾವೃತವಾಗುವ ಸೇತುವೆಯನ್ನು ಎತ್ತರಿಸಿ ಹೊಸದಾಗಿ ನಿರ್ಮಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

Shree Panjurlli Fine Dine ADD

- Advertisement -

Leave A Reply

Your email address will not be published.