ಬೆಂಗಳೂರು : ಮಾರಕ ಸೋಂಕು ಕೊರೋನಾ ದೆಸಿಯಿಂದ ಮುಂದೂಡಲ್ಪಟ್ಟಿದ್ದ ಎಸ್ಎಸ್ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಇದೆ ತಿಂಗಳ 10 ನೇ ತಾರೀಕಿಗೆ, ಸೋಮವಾರ ಸಂಜೆ 3 ಗಂಟೆಗೆ ಪ್ರಕಟಿಸಲಾಗುವದು.
ಈ ಕುರಿತು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಮಾಹಿತಿ ನೀಡಿರುವ ಶಿಕ್ಷಣ ಸಚಿವ ಸುರೇಶಕುಮಾರ್ ಅದೇ ಸಾಯಂಕಾಲ ಇಂಟರ್ನೆಟ್ನಲ್ಲೂ ರಿಸಲ್ಟ್ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
