The news is by your side.

ಸಂಕೇಶ್ವರ ಶಂಕರಲಿಂಗ ದೇವಾಲಯ ಜಲಾವೃತ್ತ

ಬೆಳಗಾವಿ: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಸಯ್ಯಾದ್ರಿ ಘಟ್ಟದ ಅರಣ್ಯಪ್ರದೇಶಗಳಲ್ಲಿ ಮಳೆಯು ಎಡೆಬಿಡದೆ‌ ಸುರಿಯುತ್ತಿರುವದರಿಂದ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರ ಪಕ್ಕದಲ್ಲಿ ಹರಿಯುವ ಹಿರಣ್ಯಕೇಶಿ ನದಿಯು ಅಪಾಯದಮಟ್ಟಕ್ಕೆ

ತಲುಪಿದ್ದು, ಸಂಕೇಶ್ವರ ನಗರದ ಕೆಲವು ತಗ್ಗು ಪ್ರದೇಶದ ಮನೆಗಳಲ್ಲಿ‌ ನದಿ ನೀರು ನುಗ್ಗಿದೆ. ಸ್ಥಳಿಯ ಶಂಕರಾಚಾರ್ಯ ಮಠದ ಶಂಕಲಿಂಗ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿದೆ. ಬಡಕುಂದ್ರಿ ಹೊಳೆಮ್ಮಾ ದೇವಸ್ಥಾನಕ್ಕೆ ನದಿ ನೀರು ಆವರಿಸಿಕೊಂಡು ಜಲಾವೃತವಾಗಿದೆ. ಹಾಗೂ ಮಹಾರಾಷ್ಟ್ರಕ್ಕೆ ಸಂಪರ್ಕ ಹೊಂದುವ ನಾಗನೂರ ಸೇತುವೆ ಮುಳುಗಡೆಯಾಗಿದೆ.

- Advertisement -

Leave A Reply

Your email address will not be published.