The news is by your side.

ಅಥಣಿ, ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕುಗಳಲ್ಲಿ ಕೃಷ್ಣ ನದಿಗೆ ಪ್ರವಾಹ

ಬೆಳಗಾವಿ : ಕೃಷ್ಣಾ ನದಿಯ ಮಟ್ಟ ಕ್ಷಣ ಕ್ಷಣಕ್ಕೂ ಹೆಚಾಗುತ್ತಿದು, ಶುಕ್ರವಾರ ಅಪಾಯದ ಮಟ್ಟ ಮೀರಿ ಹರಿಯುವ ಸಾಧ್ಯತೆಯಿದೆ. ನದಿಪಾತ್ರವಲ್ಲದೆ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ 1.21 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವದರಿಂದ ಶನಿವಾರ ಜಿಲ್ಲೆಯ ಅಥಣಿ, ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕುಗಳಲ್ಲಿ ನದಿಗೆ ಪ್ರವಾಹ ಬರುವ ಸಾಧ್ಯತೆಯಿದೆ.

ಅಥಣಿ ತಹಶಿಲ್ದಾರ ದುಂಡಪ್ಪಾ ಕೊಮಾರ,ಮತ್ತು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪನವರ ನದಿ ತೀರದ ಗ್ರಾಮಗಳಾದ, ಸಪ್ತಸಾಗರ,
ತೀರ್ಥ, ದರೂರ, ನದಿ ಇಂಗಳಗಾಂವ, ಕವಟಕೊಪ್ಪ, ಹಲ್ಯಾಳ,ಕರ್ಲಟ್ಟಿ, ಹುಲಗಬಾಳ ಗ್ರಾಮದ ಮಾಂಗ್ ತೋಟದ ವಸತಿ ಸೇರಿದಂತೆ ಅಥಣಿ ತಾಲೂಕಿನ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು .ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ
ಕೃಷ್ಣಾ, ದೂಧಗಂಗಾ, ವೇದಗಂಗಾ ನದಿಗಳ ಅಬ್ಬರ ಕ್ಷಣ ಕ್ಷಣವೂ ಹೆಚ್ಚುತ್ತಿದ್ದು ಕೃಷ್ಣಾ ನದಿಗೆ ರಾಜಾಪುರ ಬ್ಯಾರೆಟ್ ನಿಂದ 1,21,000 ಮತ್ತು ದೂಧಗಂಗಾ ನದಿಯಿಂದ 30,800 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ನದಿಯಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳಲು ಹಿಪ್ಪರಗಿ ಬ್ಯಾರೇಜ್ ನ 22 ಗೇಟ್ ಗಳ ಮೂಲಕ 1,47,000 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ, ಪ್ರವಾಹ
ಪರಿಸ್ಥಿತಿ ಎದುರಿಸಲು ಬೋಟ್ ಗಳು ಮತ್ತು ಈಜುಗಾರ ತಂಡವನ್ನು ಸಿದ್ದವಾಗಿ ಇರಿಸಲಾಗಿದೆ.

ಜನ ಮತ್ತು ಜಾನುವಾರುಗಳು ನದಿ ತೀರದ ಕಡೆಗೆ ತೆರಳದಂತೆ ಕಟ್ಟೆಚ್ಚರ ವಹಿಸಲಾಗಿದ್ದು ನದಿ ತೀರದ ಗ್ರಾಮಗಳಲ್ಲಿ ಪಂಚಾಯತಿ ವತಿಯಿಂದ
ಡಂಗುರ ಸಾರಲಾಗಿದೆ.

ಪ್ರವಾಹ ಪರಸ್ಥಿತಿ ಎದುರಾದರೆ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಜನರನ್ನು “ಕಾಳಜಿ ಕೇಂದ್ರ” ಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದ್ದು ಅಥಣಿ ತಾಲೂಕಿನ ರಡ್ಡೇರಟ್ಟಿ ಗ್ರಾಮದ ಹೊರವಲಯದಲ್ಲಿ ಕಾಳಜಿ ಕೇಂದ್ರಕ್ಕೆ ಸಿದ್ದತೆ ಮಾಡಿಕೊಂಡಿದ್ದು ಜನರು ಸಹಕರಿಸುವಂತೆ ಅಥಣಿ ತಹಶೀಲ್ದಾರ ಕೋಮಾರ ಮನವಿ ಮಾಡಿದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.