The news is by your side.

ಘಟಪ್ರಭಾ ಪೋಲಿಸ್ ರಿಂದ ಚೀಟಿಂಗ್ ಗ್ಯಾಂಗ್ ಬಂಧನ

ಬೆಳಗಾವಿ: ಜನರಿಗೆ ಮೋಸ ಮಾಡುತ್ತಿದ್ದ ಜಾಲ ಒಂದನ್ನು ಬೇಧಿಸಿರುವ ಘಟಪ್ರಭಾ ಪೊಲೀಸರು ನಾಲ್ವರು ಆರೋಪಿಗಳಿಗೆ ಹೆಡೆಮುರಿ ಕಟ್ಟಿದ್ದಾರೆ.

ಮೇಲ್ಗಡೆ ಎರಡೂ ಬದಿಗೆ 500 ರೂಪಾಯಿ ಅಸಲಿ ನೋಟು ಇಟದಟು ಒಳಗಡೆ ಕಾಗದದ ಕಟ್ಟಿಂಗ್ ಪೇಪರ್ ಗಳನ್ನು ಇಟ್ಟು ನೋಟಿನ ಬಂಡಲ್‍ಗಳಂತೆ ತಯಾರಿಸಿ ಖೋಟಾ ನೋಟು ಅಂತಾ ಹೇಳಿ ಒಂದು ಲಕ್ಷ ರೂಪಾಯಿ ಅಸಲಿ ನೋಟು ಪಡೆದುಕೊಂಡು ತಮ್ಮ ಹತ್ತಿರ ಇರುವ ಮೂರು ಲಕ್ಷ ನಕಲಿ ನೋಟುಗಳನ್ನು ಯಾರಿಗೋ ಕೊಡಲು ಬಂಧಿತ ಆರೋಪಿಗಳು ದೂಪದಾಳ ಗ್ರಾಮದ ಹಣಮಂತ ಗಾಡಿವಡ್ಡ ಎಂಬುವವರ ಮನೆಯಲ್ಲಿ ಬಾಡಿಗೆ ಇದ್ದ ರಫೀಕ್ ಅಬ್ದುಲ್ ರೆಹಮಾನ್ ದೇಸಾಯಿ ಎಂಬಾತನ ಮನೆಯಲ್ಲಿ ಆರೋಪಿಗಳು ತಯಾರು ಮಾಡುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಘಟಪ್ರಭಾ ಪೊಲೀಸರು ಈ ಮೋಸದ ಜಾಲವನ್ನು ಬಲೆಗೆ ಕೆಡವಿದ್ದಾರೆ. ಬಂಧಿತ ಆರೋಪಿಗಳು ಗೋಕಾಕ್ ಕಿಲ್ಲಾ ಮೂಲದ ದೂಪದಾಳ ಗ್ರಾಮದ ರಫೀಕ್ ಅಬ್ದುಲ್‍ರೆಹಮಾನ್ ದೇಸಾಯಿ, ರಾಯಬಾಗ ತಾಲೂಕಿನ ಸಿದ್ದಾಪುರ ಗ್ರಾಮದ ಗುಂಡು ಸದಾಶಿವ ಬಿರಾದರಪಾಟೀಲ್, ಗೋಕಾಕ್ ಕಿಲ್ಲಾ ಮೂಲದ ದೂಪದಾಳ ಗ್ರಾಮದ ಮುನಾಫ್ ರಫೀಕ್ ಮಹ್ಮದ್‍ ಇಸಾಕ್ ದೇಸಾಯಿ, ಗೋಕಾಕ್‍ನ ಆದಿಜಾಂಬವ ನಗರದ ಮಲ್ಲಿಕಾರ್ಜುನ ಸಿದ್ದಪ್ಪ ಕನ್ಮಡ್ಡಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಪೇಪರ್ ಬಂಡಲ್‍ಗಳನ್ನು, ದ್ರವ ಪದಾರ್ಥ, 2 ಕಾರ್, 2 ಬೈಕ್, 1 ಲಕ್ಷ 80 ಸಾವಿರ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ದಾಳಿಯನ್ನು ಘಟಪ್ರಭಾ ಪಿಎಸ್‍ಐ ಎಚ್.ವಾಯ್.ಬಾಲದಂಡಿ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.

- Advertisement -

Leave A Reply

Your email address will not be published.