The news is by your side.

ಈ ಸಸಿ ಎಲ್ಲರಿಗೂ ಗೊತ್ತು ಆದರೆ ಇದರ ಬಗ್ಗೆ ಯಾರಿಗೂ ಗೊತ್ತಿಲ್ಲ..?

ಈ ಸಸಿಯನ್ನು ಕನ್ನಡದಲ್ಲಿ ಶಂಖ ಪುಷ್ಪ ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಪ್ಲಿಟೋರಿಯ ಟಿರ್ನೆಷಿಯಾ. ಇದು ಹೂವನ್ನು ನೀಡುವ ಫೇಬೇಷಿಯಾ ಕುಟುಂಬಕ್ಕೆ ಸೇರಿದ ಸಸಿ. ಇದನ್ನು ಸಂಸ್ಕೃತದಲ್ಲಿ ಗಿರಿಕರ್ಣಿಕಾ ಎಂದು ಕರೆಯುತ್ತಾರೆ. ಈ ಸಸಿಗಳು ಏಷ್ಯಾ ಖಂಡದಲ್ಲಿ ಕಂಡು ಬರುತ್ತವೆ. ಇದು ನಮ್ಮ ದೇಶದಲ್ಲಿ ಸರ್ವೇ ಸಾಧಾರಣವಾಗಿ ಎಲ್ಲೆಡೆ ಕಂಡು ಬರುವ ಸರಿಯಾಗಿದೆ. ಇನ್ನು ನಮ್ಮ ಪೂರ್ವಜರು ಈ ಸಸಿಯನ್ನು ಆಯುರ್ವೇದದಲ್ಲಿ ಬಳಸುತ್ತಲೇ ಬಂದಿದ್ದಾರೆ. ಹಲವಾರು ರೋಗಗಳ ಚಿಕಿತ್ಸೆಗಳಿಗಾಗಿ ಇದನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲ ಭೂಸಾರವನ್ನು ಬೆಳೆಸಲು ಕೂಡ ಇದನ್ನು ಉಪಯೋಗಿಸುತ್ತಾರೆ. ಇನ್ನೂ ಶಂಖ ಪುಷ್ಪವನ್ನು ವಿವಿಧ ಪೂಜೆಗಳಲ್ಲೂ ಸಹ ಬಳಸಲಾಗುತ್ತದೆ. ಈ ಸಸಿಯ ಬೇರಿನಿಂದ ರಸವನ್ನು ತೆಗೆದು ಅದರಲ್ಲಿ ಜೇನು ತುಪ್ಪವನ್ನು ಬೆರೆಸಿ ತೆಗೆದುಕೊಂಡರೆ ಜ್ಞಾಪಕ ಶಕ್ತಿ ಬೆಳೆಯುತ್ತದೆ. ಮೆದುಳಿನ ಚುರುಕುತನವನ್ನು ಹೆಚ್ಚಿಸುತ್ತದೆ. ಎರಡು ಕಪ್ ನೀರಿನಲ್ಲಿ ಎರಡು ಇಂಚು ಬೇರನ್ನು ಹಾಕಿ ಚೆನ್ನಾಗಿ ಕುದಿಸಿ ಕುಡಿಯಬೇಕು ಇದರಿಂದ ಜ್ಞಾಪಕ ಶಕ್ತಿ ಬೆಳೆಯುತ್ತದೆ. ಅಲ್ಲದೆ ಒತ್ತಡವನ್ನು ಕೂಡ ಕಡಿಮೆಯಾಗಿಸಬಹುದಾಗಿದೆ. ಈ ಕಷಾಯವನ್ನು ಕುಡಿಯುವುದರಿಂದ ವೀರ್ಯ ಕಣಗಳು ವೃದ್ಧಿಯಾಗುತ್ತದೆ.

ಇನ್ನು ಜ್ವರ ಬಿಟ್ಟು ಬಿಟ್ಟು ಬರುತ್ತಿದ್ದರೆ ಇದರ ಬೇರಿನಿಂದ ತಯಾರಿಸಿದ ಕಷಾಯವನ್ನು ದಿನಕ್ಕೆರಡು ಚಮಚ ಸೇವಿಸುತ್ತಿದ್ದರೆ ಜ್ವರವು ಪುನರಾವೃತ್ತಿಗೊಳ್ಳದಂತೆ ಬಗೆಹರಿಯುತ್ತದೆ. ತುಂಬಾ ದಿನಗಳಿಂದ ಕೆಮ್ಮಿನಿಂದ ಬಳಲುತ್ತಿದ್ದರೆ ಈ ಶಂಖ ಪುಷ್ಪದ ಬೇರು, ಒಂದೆರಡು ಕರಿಮೆಣಸು ಹಾಗೂ ಆರು ತುಳಸಿ ಎಲೆಗಳನ್ನು ತೆಗೆದುಕೊಂಡು ಅರ್ಧ ಗ್ಲಾಸ್ ನೀರಿನಲ್ಲಿ ಹಾಕಿ ಕುದಿಸಬೇಕು. ಇದನ್ನು ಶೋಧಿಸಿ ಕುಡಿದಲ್ಲಿ ಪರಿಹಾರವನ್ನು ಕಾಣಬಹುದಾಗಿದೆ. ಶಂಖ ಪುಷ್ಪದ ಎಲೆಗಳು ಹಾಗೂ ಜಮಾ ಎಲೆಗಳನ್ನು ಬೆರೆಸಿ ನೀರಿನಲ್ಲಿ ಕುದಿಸಿ ಅದನ್ನು ಬಾಯಿಯಲ್ಲಿ ಹಾಕಿ ಮುಕ್ಕಳಿಸಿದರೆ ಟೌನ್ ಸೆನ್ಸ್ ಕೂಡ ಕಡಿಮೆಯಾಗುತ್ತದೆ ಜೊತೆಗೆ ಗಂಟಲು ನೋವು ಕೂಡ ಕಡಿಮೆಯಾಗುತ್ತದೆ.
ಶಂಖ ಪುಷ್ಪದ ಕಾಯಿಯಲ್ಲಿರುವ ಬೀಜಗಳನ್ನು ಪುಡಿ ಮಾಡಿ ಸ್ವಲ್ಪ ಪುಡಿಯನ್ನು ತೆಗೆದುಕೊಂಡು ಒಂದು ಗ್ಲಾಸ್ ನೀರಿನಲ್ಲಿ ಬೆರೆಸಿ ಕುಡಿದರೆ ಹೊಟ್ಟೆ ನೋವು, ಕೆಮ್ಮು ಕಡಿಮೆಯಾಗುತ್ತದೆ‌. ಇನ್ನೂ ಸ್ತ್ರೀಯರಲ್ಲಿ ಕಂಡುಬರುವ ಋತುಚಕ್ರದ ಸಮಸ್ಯೆಗಳು, ಅಧಿಕ ರಕ್ತಸ್ರಾವಕಾಗಿ ಈ ಸಸಿಯ ಎಲೆಗಳ ರಸವನ್ನು ಒಂದು ಗ್ಲಾಸ್ ನೀರಿನಲ್ಲಿ ಬೆರೆಸಿ ಕೆಲವು ದಿನಗಳವರೆಗೆ ಕುಡಿದರೆ ಪರಿಹಾರ ಸಿಗುತ್ತದೆ.

ಕೆಲವು ಸಂಶೋಧನೆಗಳಿಂದ ಈ ಸಸಿಯಲ್ಲಿ ಆಂಟಿ-ಬ್ಯಾಕ್ಟಿರಿಯಾನ್ ಹಾಗೂ ಆಂಟಿ-ಫಂಗಲ್ ಲಕ್ಷಣಗಳು ಇರುವುದನ್ನು ನಿರೂಪಿಸಲಾಗಿದೆ. ಇದರ ಎಲೆಗಳನ್ನು ಪೇಸ್ಟ್ ಮಾಡಿ ಗಾಯಗಳು ಅಥವಾ ಹುಣ್ಣುಗಳ ಮೇಲೆ ಲೇಪಿಸಿದರೆ ಬೇಗನೆ ಗಾಯಗಳು ಕಡಿಮೆಯಾಗುತ್ತವೆ. ಇದರ ಹೂಗಳು ಆಂಟಿ-ಆಕ್ಸಿಡೆಂಟ್ ಗಳನ್ನು ಹೊಂದಿರುತ್ತವೆ. ನೀರಿನಲ್ಲಿ ಈ ಹೂವನ್ನು ಹಾಕಿ ಚೆನ್ನಾಗಿ ಕುದಿಸಿ ತಣ್ಣಗಾದ ನಂತರ ಅದರಲ್ಲಿ ಜೇನು ತುಪ್ಪವನ್ನು ಬೆರೆಸಿ ಟೀ ಯಂತೆ ಕುಡಿಯುವುದರಿಂದ ಹಲವಾರು ರೋಗಗಳಿಂದ ಕಾಪಾಡುತ್ತದೆ ಎಂದು ನಿಪುಣರು ಹೇಳುತ್ತಿದ್ದಾರೆ. ಇನ್ನೊಂದು ಮುಖ್ಯವಾದ ವಿಷಯವೇನೆಂದರೆ ಈ ಸಸಿಯ ಯಾವುದೇ ಭಾಗವನ್ನು ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು ಯಾವುದೇ ರೂಪದಲ್ಲಿಯೂ ಕೂಡ ಸೇವಿಸಲೇಬಾರದು. ಇನ್ನುಳಿದವರು ಆ ಸಸಿ ಶಂಖ ಪುಷ್ಪದ ಸಸಿಯೆಂದು ಖಚಿತಪಡಿಸಿಕೊಂಡ ನಂತರವೇ ಈ ಮೊದಲು ಹೇಳಿದ ರೀತಿಯಲ್ಲಿ ಬಳಸಬಹುದಾಗಿದೆ.

– ಸುಷ್ಮಿತಾ

- Advertisement -

Leave A Reply

Your email address will not be published.