The news is by your side.

ಕೊರೋನಾ :ರವಿವಾರ ತನಕ ಗೋಕಾಕನಲ್ಲಿ ವ್ಯಾಪಾರ ಬಂದ್

 

ಗೋಕಾಕ : ಕೊರೊನಾ ಓಡಿಸಲು ಸ್ವಯಂ ನಿಯಂತ್ರಣವೇ ಮದ್ದೆಂದು ಅರಿತ ಗೋಕಾಕ ವ್ಯಾಪಾರಸ್ಥರು ನಾಳೆ ಮಂಗಳವಾರದಿಂದ ರವಿವಾರ (ದಿ.೧೬) ದವರೆಗೆ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲು  ನಿರ್ಣಯಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕಿನಿಂದ ನಗರದಲ್ಲಿ ಸಾವುಗಳು ಜರುಗಿದ ಹಿನ್ನೆಲೆಯಲ್ಲಿ ನಗರದ ದಿನಸಿ ಅಂಗಡಿಗಳ ಮಾಲಿಕರ ಮತ್ತು ಹೋಲ್ ಸೇಲ್ ಮಾಲಿಕರ ಸಂಘ, ಬಟ್ಟೆ ವ್ಯಾಪಾರಸ್ಥರ ಸಂಘ, ಸರಾಫ್ ಅಸೋಸಿಯೇಷನ್  ಎಲ್ಲ ಅಂಗಡಿಗಳನ್ನು ಒಂದು ವಾರದವರೆಗೆ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದ್ದಾರೆ.

- Advertisement -

Leave A Reply

Your email address will not be published.