The news is by your side.

ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ತನ್ನ ಮಗನ ಶಿಕ್ಷಣಕ್ಕಾಗಿ ಮನೆಯನ್ನು ಮಾರಿದ್ದ, ಈಗ ಮಗ “IAS!”

ಲೋಕಸೇವಾ ಆಯೋಗವು ಜಾಹೀರು ಪಡಿಸಿದ ರಿಜಲ್ಟ್ ನಿಂದ ಅನೇಕ ವಿದ್ಯಾರ್ಥಿಗಳ ಸಫಲತೆಯ ಕುರಿತು ಹಾಗೂ ಅವರು ಪಟ್ಟ ಪರಿಶ್ರಮದ ವಿಶೇಷ ಕಥೆಗಳು ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಪ್ರಸಿದ್ಧವಾಗುತ್ತಿವೆ. ಇದರಲ್ಲಿ ಒಟ್ಟು 829 ವಿದ್ಯಾರ್ಥಿಗಳು ಸಫಲತೆಯನ್ನು ಪಡೆದಿದ್ದಾರೆ. ಇದರಲ್ಲಿಯೇ 26 ನೇ ರ್ಯಾಂಕನಲ್ಲಿ ಪಾಸಾಗಿ ಯಶಸ್ಸನ್ನು ಕಂಡ ಪ್ರದೀಪ್ ಸಿಂಹನ ಕಥೆಯು ರೋಮಾಂಚನ ಭರಿತವಾಗಿದೆ.

ತಂದೆ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು.

ಪ್ರದೀಪ ಮೊದಲಿನಿಂದಲೂ ಇಂಡಿಯನ್ ಎಡ್ಮಿನಿಸ್ಟ್ರೇಟಿವ್ ಸರ್ವಿಸೆಸ್ ಹುದ್ದೆಯಲ್ಲಿ ಕೆಲಸ ಮಾಡುವ ಆಸೆ ಹೊತ್ತಿದ್ದರು. ಮಗ ಅಭ್ಯಾಸದಲ್ಲಿ ಮುಂದೆ ಇರುವ ಬಗ್ಗೆ ತಂದೆ ಚೆನ್ನಾಗಿ ಅರಿತಿದ್ದರು. ಇದಕ್ಕೆ ಕೋಚಿಂಗ್ ಕ್ಲಾಸ್ ಜಾಯಿನ್ ಮಾಡಲು 2017 ರಲ್ಲಿ ಪ್ರದೀಪ್ ದೆಹಲಿಗೆ ಬಂದರು. ಅಲ್ಲಿ ವರ್ಷದ ಫೀ 1.5 ಲಕ್ಷ ಇತ್ತು. ಇನ್ನು ಇರುವದಕ್ಕಾಗಿ ಹಾಗೂ ಊಟ ತಿಂಡಿ ಖರ್ಚು ಬೇರೆ. ಇದನ್ನೆಲ್ಲ ಅರಿತ ತಂದೆ ಇಂದೋರ್ ನಲ್ಲಿಯ ತಮ್ಮ ಮನೆಯನ್ನು ಮಾರಿದರು. ಇಷ್ಟಕ್ಕೆ ಸಾಲದೆ ಅವರು ಬಿಹಾರಿನಲ್ಲಿದ್ದ ಪಿತ್ರಾರ್ಜಿತ ಜಮೀನನ್ನೂ ಮಾರಿದರು. ಇವರು ಮೂಲತಃ ಬಿಹಾರಿನವರಾಗಿದ್ದರು. ಆದರೆ ವಾಸ್ತವ್ಯ ಮಧ್ಯಪ್ರದೇಶದ ಇಂದೋರ್ ನಲ್ಲಿ ಮಾಡುತ್ತಿದ್ದರು. ಇಲ್ಲಿಯೇ ಒಂದು ಪೆಟ್ರೋಲ್ ಬಂಕ್ ನಲ್ಲಿ ಪ್ರದೀಪ್ ತಂದೆ ಕೆಲಸ ಮಾಡುತ್ತಿದ್ದರು.

ಇಂಡಿಯಾ ಟುಡೇಯ ವರದಿಯ ಪ್ರಕಾರ ಪ್ರದೀಪ್ ಗೆ ಬ್ಯಾಡ್ಮಿಂಟನ್ ಮತ್ತು ಚಲನಚಿತ್ರಗಳನ್ನು ನೋಡುವ ಹವ್ಯಾಸ ತುಂಬಾ ಇತ್ತಂತೆ. ಈ ಎಲ್ಲ ಮನಸ್ಸಿನ ಹವ್ಯಾಸಗಳನ್ನು ಬದಿಗಿಟ್ಟು ದಿನದ 15 ರಿಂದ 16 ಗಂಟೆಗಳವರೆಗೆ ಅಭ್ಯಾಸವನ್ನು ಮಾಡಿ 26 ನೇ ರ್ಯಾಂಕನಲ್ಲಿ ಪಾಸಾಗಿ ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡರು.

ಮನೆಯಲ್ಲಿ ಅನೇಕ ಆರ್ಥಿಕ ತೊಂದರೆಗಳಿದ್ದರೂ ಅವುಗಳ ಮೇಲೆ ಯಶಸ್ವಿಯಾಗಿ ವಿಜಯ ಸಾಧಿಸಿ ಮಗನಿಗಾಗಿ IAS ಆಗುವ ದಾರಿಯನ್ನು ಸುಗಮ ಮಾಡಿಕೊಟ್ಟರು ನನ್ನ ತಂದೆ ಎಂದು ಪ್ರದೀಪ್ ಸಿಂಹ ಅಭಿಮಾನದಿಂದ ಹೇಳುತ್ತಾರೆ. ನನ್ನನ್ನು IAS ಮಾಡುವ ಛಲ ನನಗಿಂತಲೂ ನನ್ನ ಮನೆಯವರದ್ದು ಹೆಚ್ಚಿನದಾಗಿತ್ತು.

ಮಗನ ಸಫಲತೆಯಿಂದ ಪ್ರದೀಪ್ ಸಿಂಹನ ಪರಿವಾರದವರೆಲ್ಲರೂ ತುಂಬಾ ಖುಷಿಯಲ್ಲಿದ್ದಾರೆ. ತಂದೆ ANI ಗೆ ಕೊಟ್ಟ ಇಂಟರ್ವ್ಯೂವ್ ನಲ್ಲಿ ಹೇಳುತ್ತಾರೆ, 2018 ರಲ್ಲಿ ಪ್ರದೀಪ್ IRS (internal revenue service) ನಲ್ಲಿ 260 ನೇ ರ್ಯಾಂಕ್ ನಲ್ಲಿ ಪಾಸಾಗಿ ಡ್ಯೂಟಿ ಜಾಯಿನ್ ಮಾಡಿದ್ದರು. ಆದರೆ ಪ್ರದೀಪ್ ಗೆ ಮಾತ್ರ IAS ಆಗುವ ಪ್ರಬಲ ಆಸೆ ಇತ್ತು. ಹೀಗಾಗಿ 2019 ರಲ್ಲಿ ಮತ್ತೊಮ್ಮೆ ಪರೀಕ್ಷೆಯನ್ನು ಕೊಟ್ಟು ಅದರಲ್ಲಿ ಉತ್ತೀರ್ಣನಾದ ಬಗ್ಗೆ ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ ಎಂದು ತಮ್ಮ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.

 

- Advertisement -

Leave A Reply

Your email address will not be published.