The news is by your side.

ಎಸ್ಎಸ್ಎಲ್ ಸಿ ಯಲ್ಲಿ 49 % ಪಡೆದ ವಿದ್ಯಾರ್ಥಿಯೊಂದಿಗೆ ಸಂಭ್ರಮಿಸಿದ ಜನ

ಬೆಳಗಾವಿ, ೧೧- ನಗರದ ಬಾಂಧೂರ ಗಲ್ಲಿಯ ವಿದ್ಯಾರ್ಥಿ ಸಮರ್ಥ ಗೋವಿಲ್ಕರ್ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇ.‌ 48.64 ಅಂಕ ಗಳಿಸಿ ಉತ್ತೀರ್ಣ ಆಗಿದ್ದಕ್ಕೆ ಗಲ್ಲಿಯ ನಿವಾಸಿಗಳು ಗುಲಾಲ ಎರಚಿ, ಶಾಲು ಹೊದಿಸಿ ಆ ವಿದ್ಯಾರ್ಥಿಯನ್ನು ಸನ್ಮಾನಿಸಿ, ಸಂಭ್ರಮಿಸಿದರು.

ಬಾಂಧೂರ ಗಲ್ಲಿಯ ಮರಗಾಯಿ ಗ್ರುಪ್ ಆಶ್ರಯದಲ್ಲಿ ಸೋಮವಾರ ರಾತ್ರಿ ವಿದ್ಯಾರ್ಥಿಗೆ ಗುಲಾಲು ಎರಚಿ, ಶಾಲು ಹೊದಿಸಿ ಸನ್ಮಾನ ಮಾಡಿದರು. ವಿದ್ಯಾರ್ಥಿಯ ಫೋಟೊ ಸಹಿತ ಒಂದು ಕಟೌಟ್ ಹಾಕಿ ಶುಭಾಶಯ ಕೋರಿದ್ದಾರೆ.

ವಿದ್ಯಾರ್ಥಿಗೆ ಶುಭಾಶಯ ಕೋರುವ ಬ್ಯಾನರ್ ನಲ್ಲಿ ವಿದ್ಯಾರ್ಥಿಯ ಫೋಟೊ ಹಾಕಿ, ಅವರು ಪಡೆದ ಮುಖ್ಯ ಅಂಕ ಶೇ. 48 ಎಂಬುವದನ್ನು ಚಿಕ್ಕ ಅಕ್ಷರದಲ್ಲಿ ಬರೆದು, .64 ಎಂಬುವದನ್ನು ದೊಡ್ಡ ಅಕ್ಷರದಲ್ಲಿ ಬರೆದು ಇಂಡೈರೆಕ್ಟ್ ಆಗಿ ವ್ಯಂಗ್ಯ ಕೂಡ ಮಾಡಲಾಗಿದೆ. ಗಲ್ಲಿಯ ಈ ಗ್ರೂಪ್ ನ ಸುಮಾರು 30ಕ್ಕೂ ಹೆಚ್ಚು ಜನ ಸೇರಿ ವಿದ್ಯಾರ್ಥಿ ಪರ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

Leave A Reply

Your email address will not be published.