The news is by your side.

ಬಿಮ್ಸದಿಂದ ಒಂದು ಗುಡ್ ನ್ಯೂಸ್; ಕೊರೊನಾ ಪಾಸಿಟಿವ್ ಮಹಿಳೆಯರಿಗೆ ಯಶಸ್ವಿ ಹೆರಿಗೆ

ಬೆಳಗಾವಿ : ಬಿಮ್ಸದಿಂದ ಒಂದು ಗುಡ್ ನ್ಯೂಸ್ ಬಂದಿದೆ.. ಬೆಳಗಾವಿ ಜಿಲ್ಲಾಸ್ಪತ್ರೆ ಮಾರಕ ಕೊರೋನಾ ಸೋಂಕಿನಿಂದ ಬಾಧಿತರಾಗಿದ್ದ 70 ಮಹಿಳೆಯರಿಗೆ ಯಶಸ್ವಿ ಹೆರಿಗೆ ಮಾಡಿಸಿದೆ.
ಈವರೆಗೂ 70 ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಲಾಗಿದ್ದು, ಇದರಲ್ಲಿ 34 ಸೀಜರಿನ್ ಹಾಗೂ 36 ನಾರ್ಮಲ್ ಡಿಲಿವರಿ ಆಗಿವೆ ಎಂದು ಬೆಳಗಾವಿ ವೈದ್ಯಕೀಯ ಶಿಕ್ಷಣ ಸಂಸ್ಥೆ( ಬಿಮ್ಸ್ ) ಜಿಲ್ಲಾಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ಮಾಹಿತಿ ನೀಡಿದ್ದಾರೆ.

ಸಂತಸದ ಸಂಗತಿಯೆಂದರೆ ಜನಿಸಿದ ಯಾವುದೇ ಶಿಶುವಿಗೂ ಸೋಂಕಿನ ಲಕ್ಷಣವಿಲ್ಲ. ಹೆರಿಗೆಯಾದ 5 ಅಥವಾ 7ನೇ ದಿವಸಕ್ಕೆ ಶಿಶುಗಳ ಸ್ವ್ಯಾಬ್ ಟೆಸ್ಟ್ ಮಾಡಲಾಗಿದ್ದು, ಎಲ್ಲ ನೆಗೆಟಿವ್ ಆಗಿವೆಯೆಂದೂ ಅವರು ತಿಳಿಸಿ ತಾಯಿ, ಮಕ್ಕಳೇಲ್ಲರೂ ಆರೋಗ್ಯವಾಗಿದ್ದು ಕೆಲವರು ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.

ಸೋಂಕಿತರಿಗೆ ಹೆರಿಗೆ ಮಾಡಿಸುವದು ವೈದ್ಯಕೀಯ ಸಿಬ್ಬಂದಿಗೆ ತುಂಬಾ ರಿಸ್ಕ್ ನ ಸಂಗತಿ, ಅವರು ಸೋಂಕಿತೆಯರ ವೈರಾಣುಗೆ ಡೈರೆಕ್ಟ್ ಎಕ್ಸ್‌ಪೋಸ್ ಆಗುವ ಸಾಧ್ಯತೆ ತುಂಬಾ ಇರುತ್ತದೆ, ಇಂತಹ ಸಂದರ್ಭದಲ್ಲೂ ತಮ್ಮ ಸಿಬಂಧಿ ಕಾರ್ಯ ನಿರ್ವಹಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ 7 ಕೊರೋನಾ ಸೋಂಕಿತರಿಗೆ ಡಯಾಲಿಸಿಸ್ ಕೂಡ ಮಾಡಲಾಗುತ್ತಿದೆಯೆಂದೂ ತಿಳಿಸಿದರು.

ಎರಡು ದಿನಗಳ ಹಿಂದೆ ಖಾನಾಪುರ ತಾಲೂಕಿನ ಹಲಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಸೋಂಕಿತ ಮಹಿಳೆಯೊಬ್ಬರಿಗೆ ಯಶಸ್ವಿ ಹೆರಿಗೆ ಮಾಡಿಸಿದ್ದು ರಾಜ್ಯಮಟ್ಟದ ಸುದ್ದಿಯಾಗಿ ರಾಜ್ಯದ ವೈದ್ಯಕೀಯ ಸಚಿವರಾದ ಡಾ ಸುಧಾಕರ ಟ್ವಿಟ್ ಮೂಲಕ ವೈದ್ಯಕೀಯ ಸಿಬ್ಬಂದಿಯ ಕಾರ್ಯ ಶ್ಲಾಘಿಸಿದ್ದರು.

- Advertisement -

Leave A Reply

Your email address will not be published.