ಗೋಕಾಕ:: ನಗರದಲ್ಲಿ ನಾಳೆಯಿಂದ ಐದು ದಿನಗಳ ಕಾಲ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದು ನಗರಸಭೆ ಕಮಿಷನರ್ ಶಿವನಂದ ಹಿರೇಮಠ್ ತಿಳಿಸಿದ್ದಾರೆ.
ಅಂಗಡಿ, ಮುಗ್ಗಟ್ಟು ಹಾಗೂ ವ್ಯಾಪಾರಸ್ತರೊಂದಿಗೆ ಮಂಗಳವಾರ ಈ ಬಗ್ಗೆ ನಡೆದ ಸಭೆಯಲ್ಲಿ ತೀರ್ಮಾನಿಸಲ ಸಣ್ಣ ಗಿದೆ. ನಾಳೆಯಿಂದ ಆ. 15(ರವಿವಾರ)ದವರೆಗೂ ಲಾಕ್ ಡೌನ್ ಇರಲಿದೆ.
ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚುತಲಿದೆ. ಹೀಗಾಗಿ ಬಟ್ಟೆ ಅಂಗಡಿ, ಹೊಟೇಲ್ ಮಾಲೀಕರು, ಮೊಬೈಲ್ ಶಾಪ್ ಮಾಲೀಕರು ಸೇರಿದಂತೆ ಬಹುತೇಕ ಎಲ್ಲ ವ್ಯಾಪಾರಸ್ಥರು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಕೊರೊನಾ ಸೋಂಕು ಚೈನ್ ಬ್ರೇಕ್ ಮಾಡಲು ಲಾಕ್ ಡೌನ್ ಅವಶ್ಯವಾಗಿದೆ. ಬೆಳ್ಳಗ್ಗೆ 11 ಗಂಟೆವರೆಗೂ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ.
