The news is by your side.

SSLC ಕೂಲಿ ಮಾಡಿ ಟಾಪ್ ಬಂದ ವಿದ್ಯಾರ್ಥಿ

ಯಾದಗಿರಿ: ಗುಡಿಸಲಿನಲ್ಲಿದ್ದು ವ್ಯಾಸಾಂಗ ಮಾಡಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ಮಹೇಶ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾನೆ.

ಬೆಂಗಳೂರಿನ ಇಂದಿರಾ ನಗರದಲ್ಲಿರುವ ಜೀವನಭೀಮಾ ನಗರದ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಓದಿದ ಮೆಹೇಶ್ ಕೂಲಿ ಕೆಲಸ ಮಾಡುತ್ತಲೇ ವಿದ್ಯಾಭ್ಯಾಸ ಮಾಡುತ್ತ 625ಕ್ಕೆ 616 ಅಂಕ ಪಡೆದು ಕೀರ್ತಿ ತಂದಿದ್ದಾನೆ. ಪಾಲಕರೊಂದಿಗೆ ಕೂಲಿ ಕೆಲಸ ಮಾಡುತ್ತಲೇ ಓದಿಕೊಂಡು ಸಾಧನೆಗೈದ ಪ್ರತಿಭೆಯನ್ನು ಗುರುತಿಸಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ ಕುಮಾರ್ ಮಂಗಳವಾರ ಬೆಳಗ್ಗೆ ಗುಡಿಸಲಿಗೆ ಭೇಟಿ ನೀಡಿ ವಿದ್ಯಾರ್ಥಿಯನ್ನು ಸನ್ಮಾನಿಸಿ ಪ್ರೋತ್ಸಾಹ ಧನದ ಚೆಕ್ ನೀಡಿ ಅಭಿನಂದಿಸಿ ಶುಭ ಕೋರಿದ್ದಾರೆ.

ವಿದ್ಯಾರ್ಥಿ ಗುಡಿಸಲಿನಲ್ಲಿ ನೆಲೆಸಿ , ಕೂಲಿ ಮಾಡುತ್ತಲೇ ಸಾಧನೆ ಮಾಡಿದ್ದು ಬೆಂಗಳೂರಿನಲ್ಲಿದ್ದೇ ತವರು ಜಿಲ್ಲೆ ಯಾದಗಿರಿಗೂ ಕೀರ್ತಿ ತಂದಿದ್ದು ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ

- Advertisement -

Leave A Reply

Your email address will not be published.