The news is by your side.

ಗಾಂಜಾ ಸಾಗಾಟ ಜಾಲ ಪೋಲಿಸ್ ಬಲೆಗೆ

ಬಂಟ್ವಾಳ: ಸುಮಾರು 24 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದು ಪೋಲೀಸರು ದೊಡ್ಡ ಗ್ಯಾಂಗ್ ಬಂಧಿಸಿದ ಘಟನೆ ಬಂಟ್ವಾಳ ತಾಲೂಕು ಕೇದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ನಡೆದಿದೆ.

ಪೋಲಿಸರು ಇಂದು ಬೆಳಿಗ್ಗೆ ಪಾಟ್ರಕೋಡಿ ಎಂಬಲ್ಲಿ ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಕೆಎ.19.ಎಎ.9294 ನೊಂದಣಿ ಸಂಖ್ಯೆಯ ಪಿಕ್‌ ಆಪ್‌ ವಾಹನ, ಕೆಎಲ್ 14-ಎಕ್ಸ್-9707 ನೊಂದಣಿ ಸಂಖ್ಯೆಯ ಕಾರೊಂದರಲ್ಲಿ ಅಪಾರ ಪ್ರಮಾಣದ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ರೂ 17,50,000 ಮೌಲ್ಯದ ಸುಮಾರು 175 ಕೆ.ಜಿ ಗಾಂಜಾ, ಸುಮಾರು ರೂ 3,00,000 ಮೌಲ್ಯದ ಪಿಕ್ ಅಪ್ ವಾಹನ, ಸುಮಾರು ರೂ 4,00,000 ಮೌಲ್ಯದ ಕಾರು ಸೇರಿದಂತೆ ಒಟ್ಟು ರೂ 24,50,000 ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

Leave A Reply

Your email address will not be published.