The news is by your side.

UPSC Topper ಮೇಘನಾಗೆ ಢಿಸಿಎಂ ಸನ್ಮಾನ: ಏಕೆ ? ಏನು? ನೀವೇ ನೋಡಿ..

ಬೆಂಗಳೂರು:  ಸತತ ಅಧ್ಯಯನದ ಮೂಲಕ  ಯುಪಿಎಸ್’ಸಿ ಪರೀಕ್ಷೆಯಲ್ಲಿ  ಸಾಧನೆ ಮಾಡಿರುವ ವಿಶೇಷಚೇತನ ಪರೀಕ್ಷಾರ್ಥಿ ಮೇಘನಾ ಅವರನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ  ನಗರದಲ್ಲಿ ಮಂಗಳವಾರ ಸನ್ಮಾನಿಸಿದರು.

465ನೇ ರಾಂಕ್ ಪಡೆದು ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅವರಿಗೆ ಎರಡೂ ಕಣ್ಣುಗಳು ಕಾಣುವುದಿಲ್ಲ. ಡಾ: ರಾಜಕುಮಾರ ಅಕಾಡೆಮಿಯಲ್ಲಿ ಅವರು ತರಬೇತಿ ಪಡೆದರು.

ಯಾವುದೇ ರೀತಿಯ ಅಂಗವೈಕಲ್ಯ ಇಲ್ಲದ ವಿದ್ಯಾರ್ಥಿಗಳೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಸುಲಭದ ಮಾತಲ್ಲ. ಆದರೆ ಮೇಘನಾ ಅವರು ಅಂಥ ಸವಾಲನ್ನು ಎದುರಿಸಿ ಯಶಸ್ವಿಯಾಗಿ ಗುರಿ ಮುಟ್ಟಿ ಇತರೆ ಪರೀಕ್ಷಾರ್ಥಿಗಳಿಗೆ ಮಾದರಿ ಹಾಗೂ ಪ್ರೇರಣೆಯಾಗಿದ್ದಾರೆಂದು ಉಪ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಡಾ. ರಾಜಕುಮಾರ್ ಅಕಾಡೆಮಿಯ ಕಾರ್ಯವನ್ನು ಡಿಸಿಎಂ ಮನಸಾರೆ ಹೊಗಳಿದ್ದಾರೆ.

- Advertisement -

Leave A Reply

Your email address will not be published.