The news is by your side.

ಬಸ್ ಬೆಂಕಿ ದುರಂತದಲ್ಲಿ ಒಂದೇ ಕುಟುಂಬದ ಐವರ ಸಜೀವ ದಹನ

 

ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ಕೆ.ಆರ್.ಹಳ್ಳಿ ಬಳಿ ಖಾಸಗಿ ಬಸ್ ಬೆಂಕಿಗಾಹುತಿಯಾಗಿ ವಿಜಯಪುರ ಮೂಲದ ಐವರು ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಇಂದು ಬೆಳಿಗ್ಗೆ ಸಜೀವ ದಹನವಾದ ಒಂದೇ ಕುಟುಂಬದ ಐವರು ಐವರ ಮೃತದೇಹ ಪತ್ತೆಯಾಗಿವೆ.
ಗಣೇಶನಗರದ ನಿವಾಸಿಗಳಾದ ಶೀಲಾ ರವಿ (33), ಸ್ಪರ್ಷಾ (8) ಸಮೃದ್ಧ (5), ಕವಿತಾ ವಿನಾಯಕ (29)ಹಾಗೂ ನಿಶ್ಚಿತಾ (3) ಮೃತರು ಎಂದು ಎಸ್ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.
ಮೂವರು ಮಕ್ಕಳು, ಇಬ್ಬರು ಮಹಿಳೆಯರು ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.ಕುಕ್ಕೆ ಶ್ರೀ ಹೆಸರಿನ ಖಾಸಗಿ ಟ್ರಾವಲ್ಸ್ ರಾತ್ರಿ 9ಗಂಟೆಗೆ ಬಸ್ ನಿಲ್ದಾಣ ಬಳಿ ಇರುವ ಟ್ರಾವಲ್ಸ್ ನಿಂದ 32 ಜನರನ್ನು ಹೊತ್ತುಕೊಂಡು ಹೋಗಿತ್ತು. ಗಣೇಶನಗರ ಬಸ್ ಸ್ಟಾಪ್ ನಿಂದ ಮೃತರು ಬಸ್ ಏರಿದ್ದಾರೆ. ರಾತ್ರಿ 4ಗಂಟೆ ಬಳಿ ಚಿತ್ರದುರ್ಗ ಬಳಿ ಈ ದುರ್ಘ ನಡೆದಿದೆ. ಮೃತರ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ…

- Advertisement -

Leave A Reply

Your email address will not be published.