The news is by your side.

“ನವೀಕರಿಸಬಹುದಾದ ಇಂಧನಗಳ ಕುರಿತು ಕಾರ್ಯಾಗರ”

ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದಿ ಸಂಸ್ಥೆ ಬೆಂಗಳೂರ ಗ್ರಾಮೀಣ ಅಭಿವೃದಿ ಮತ್ತು ಪಂಚಾಯತ ರಾಜ ಇಲಾಖೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ. ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಜನರಿಗಾಗಿ ನವೀಕರಿಸಬಹುದಾದ ಇಂಧನಗಳ ಕುರಿತು ಕಾರ್ಯಾಗರವನ್ನು ಗುರುವಾರ ದಿನಾಂಕ: 13 ರಂದು ಮುಂಜಾನೆ 10-30ಕ್ಕೆ ಹುಕ್ಕೇರಿ ತಾಲೂಕಿನ ಯರಗಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ ಸ್ಕೂಲ್ ಸಭಾಂಗನದಲ್ಲಿ ಆಯೋಜಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಾಗಿ ವ್ಹಿ.ಟಿ.ಓ. (ಗಿ.ಖಿ.ಔ) ಜೈವಿಕ ಇಂಧನ ವಿಭಾಗದ ವಿಶೇಷ ಅಧಿಕಾರಿಗಳಾದ ಶ್ರೀ ಸಿ. ಸಿ. ಗವಿಮಠ, ಬೆಳಗಾವಿ ವಿಜ್ಞಾನ ಕೇಂದ್ರದ ಶ್ರೀ ರಾಜಶೇಖರ ಪಾಟೀಲ, ಶ್ರೀ ಪ್ರದಿಪ್ ಪಟ್ಟಣಶೆಟ್ಟಿ , ಶ್ರೀ ಬಾಳೇಶ ಕುರಳಿ ಆಗಮಿಸುತ್ತಿದ್ದಾರೆ. ಎಂದು ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಮತಿ. ವೈಜಯಂತಿ ಚೌಗಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Leave A Reply

Your email address will not be published.