The news is by your side.

ಶ್ರೀಗಂಧ ಕಳ್ಳನ ಬಂಧನ

 

ಬೆಳಗಾವಿ: ಶ್ರೀ ಗಂಧ ಮರದ ತುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ
ಆಟೋನಗರದ ವಿಶಾಲ ಹನುಮಂತ ಬೆಲೆಕರ ಎಂಬವನನ್ನು ಬಂಧಿಸಲಾಗಿದೆ.
ಶ್ರೀಗಂಧ ಮರದ ತುಂಡುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿ ಮೇರೆಗೆ ಖಡೇ ಬಜಾರ್ ಠಾಣೆ ಎಸಿಪಿ ಚಂದ್ರಪ್ಪ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಗೆ ಹೆಡೆಮುರಿ ಕಟ್ಟಲಾಗಿದೆ. ಬಂಧಿತ ಆರೋಪಿಯಿಂದ 4 ಲಕ್ಷ ಮೌಲ್ಯದ 20 ಕೆಜಿ ಶ್ರೀಗಂಧ ತುಂಡುಗಳು, 200 ರೂಪಾಯಿ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತ ಆರೋಪಿ ಚಿಕ್ಕೋಡಿ ತಾಲೂಕಿನ ಗಳತಗಾ, ಭೀಮಾಪುರವಾಡಿ ಗ್ರಾಮದವನಾಗಿದ್ದು, ಸಧ್ಯ ಬೆಳಗಾವಿಯ ಆಟೋ ನಗರದಲ್ಲಿ ವಾಸವಿದ್ದಾನೆ. ಬಂಧಿತ ಆರೋಪಿ ವಿರುದ್ಧ ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಕಲಂ 86, 87, ಕರ್ನಾಟಕ ಅರಣ್ಯ ಕಾಯ್ದೆ 1963ರ ಪ್ರಕಾರ ದೂರು ದಾಖಲಾಗಿದ್ದು. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Leave A Reply

Your email address will not be published.