The news is by your side.

RPD ಕ್ರಾಸ್ ಬಳಿ ಪೈಪಲೈನ್ ಒಡೆದು ನೀರು ಪೋಲು: ಸ್ಮಾರ್ಟ್ ಸಿಟಿ ಮೀಟಿಂಗ್ ನಲ್ಲಿ ಅಧಿಕಾರಿಗಳು ಬಿಜಿ

ಬೆಳಗಾವಿ ::ಕುಡಿಯುವ ನೀರಿನ ಪೈಪ್‍ಲೈನ್ ಒಡೆದು ನೀರು ಚರಂಡಿ ಪಾಲಾಗುತ್ತಿರುವ ಘಟನೆ ಆರ್ ಪಿ ಡಿ ಕ್ರಾಸ್ ನ ಸರಾಫ್ ಕಾಲನಿಯ ಅಜಂತಾ ಹೋಟೆಲ್ ಬಳಿ ಸಂಭವಿಸಿದೆ.

ಕಳೆದ 15 ದಿನಗಳಿಂದ ನೀರು ಪೋಲಾಗುತ್ತಿದ್ದರೂ ಜಲಮಂಡಳಿ, ಮಹಾನಗರ ಪಾಲಿಕೆ ಕ್ರಮ ಕೈಗೊಂಡಿಲ್ಲ .
ವಿನಾಕಾರಣ ನೀರು ಸೋರಿಕೆಯಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬೆಳಗಾವಿ ಆರ್ ಪಿ ಡಿ ಕ್ರಾಸ್‍ನ ನಾಗರಿಕರು ಜಲಮಂಡಳಿ, ಪಾಲಿಕೆ ಅಧಿಕಾರಿಗಳು ನೀರು ಪೋಲು ತಡೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳೆಲ್ಲ ಸ್ಮಾರ್ಟ್ ಸಿಟಿ ಮೀಟಿಂಗ್ ಗಳಲ್ಲಿ ಬಿಜಿ ಯಾಗಿದ್ದರು. ಆದರೆ.. ಪಾಪ..ಈಗ ಕೊರೊನಾ ಕೂಡ ಇದರಲ್ಲಿ ಸೇರಿಕೊಂಡಿರುವುದರಿಂದ ಯಾರಿಗೂ ಪುರಸೊತ್ತು ಸಿಗುತ್ತಿರಲಿಲ್ಲ ಎನ್ನಲಾಗಿದೆ.

- Advertisement -

Leave A Reply

Your email address will not be published.