The news is by your side.

ಇಬ್ಬರಿಗೆ ಕೊರೊನಾ: ಹಳೇ ಕೆಇಬಿ ಕಚೇರಿ ಸೀಲ್ ಡೌನ್

ಬೆಳಗಾವಿ: ರೈಲ್ವೆ ನಿಲ್ದಾಣ ಬಳಿಯ ಹೆಸ್ಕಾಂ ಕಚೇರಿಯನ್ನು ರವಿವಾರದವರೆಗೆ ಸೀಲ್‍ಡೌನ್ ಮಾಡಲಾಗಿದೆ.

ಹೆಸ್ಕಾಂ ಕಚೇರಿಯಲ್ಲಿ ಇಬ್ಬರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಕೊರೋನಾ ಸೋಂಕು ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ತನ್ನ ಕದಂಬ ಬಾಹುಗಳನ್ನು ಪಸರಿಸತೊಡಗಿದೆ. ಬೆಳಗಾವಿ ರೈಲ್ವೆ ನಿಲ್ದಾಣ ಬಳಿಯ ಹೆಸ್ಕಾಂ ಕಚೇರಿಯಲ್ಲಿ ಇಬ್ಬರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಕಚೇರಿಗೆ ಆಗಮಿಸಿದ ಗ್ರಾಹಕರಿಗೆ ಆತಂಕ ಶುರುವಾಗಿದೆ.

ವಿದ್ಯುತ್ ಶುಲ್ಕ ಪಾವತಿ ಸೇರಿದಂತೆ ಇತರೆ ಕಾರಣಗಳಿಂದ ಹೆಸ್ಕಾಂ ಕಚೇರಿಗೆ ಆಗಮಿಸಿದವರು ಸ್ವಯಂ ಪರೀಕ್ಷೆಗೆ ಒಳಪಡಬೇಕು ಎಂದು ಸೂಚನೆ ನೀಡಲಾಗಿದೆ. ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣ ಬಳಿಯ ಹೆಸ್ಕಾಂ ಕಚೇರಿಯನ್ನು ಭಾನುವಾರದವರೆಗೆ ಸೀಲ್‍ಡೌನ್ ಮಾಡಲಾಗಿದೆ. ಸೋಮವಾರದಿಂದ ಹೆಸ್ಕಾಂ ಕಚೇರಿ ಕಾರ್ಯ ಆರಂಭಿಸಲಿದೆ ಎಂದು ತಿಳಿಸಲಾಗಿದೆ.

- Advertisement -

Leave A Reply

Your email address will not be published.