The news is by your side.

ಕಳೆದ ವರ್ಷದ ಪ್ರವಾಹ ಪರಿಹಾರ ಸಿಕ್ಕಿಲ್ಲ.. ಈ ವರ್ಷ ದ್ದು ಲೆಕ್ಕ ಮಾಡಿಲ್ಲ

ಬೆಳಗಾವಿ: ಅಪಾರ ಆಸ್ತಿ ಪಾಸ್ತಿ ನಷ್ಟ ಅನುಭವಿಸಿದ ಉಗಾರಖುರ್ದ ಗ್ರಾಮದ ಪ್ರವಾಹ ಸಂತ್ರಸ್ತರಿಗೆ ಇದುವರೆಗೂ ಪರಿಹಾರ ಸಂದಾಯ ಆಗಿಲ್ಲ. ಕೇಳಿದರೆ ತಾಂತ್ರಿಕ ಕಾರಣಗಳ ನೆಪ ಹೇಳಲಾಗುತ್ತಿದೆ. ಪ್ರವಾಹದಲ್ಲಿ ಮನೆ, ಮಠ, ಆಸ್ತಿ ಪಾಸ್ತಿ ಕಳೆದುಕೊಂಡಿರುವ ಸಂತ್ರಸ್ತರು ಸಂಕಷ್ಟದಲ್ಲಿದ್ದು, ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪ್ರವಾಹ ಸಂತ್ರಸ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಇದೆಲ್ಲ ಕಳೆದ ವರ್ಷದ ಬಾಕಿಗೆ ಸಂಬಂಧಿಸಿದ್ದು.

ಸರ್ಕಾರದ ಧೋರಣೆ ವಿರುದ್ಧ ಸಂತ್ರಸ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರವಾಹ ಸಂತ್ರಸ್ತ ವಿರೂಪಾಕ್ಷಪ್ಪ ನರಿ ಮಾತನಾಡಿ, ಕಾಗವಾಡ ತಾಲೂಕಿನ ಬಹುತೇಕ ಗ್ರಾಮಗಳ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲಾಗುತ್ತಿದೆ. ಆದರೆ ಉಗಾರಖುರ್ದ ಗ್ರಾಮದ ಸಂತ್ರಸ್ತರಿಗೆ ಪರಿಹಾರ ಕೇಳಿದರೆ ತಾಂತ್ರಿಕ ಕಾರಣ ಎಂಬ ನೆಪ ಹೇಳಲಾಗುತ್ತಿದೆ. ಸರ್ಕಾರ ಕೂಡಲೇ ಇದನ್ನು ಸರಿಪಡಿಸಿ, ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Shree Panjurlli Fine Dine ADD

- Advertisement -

Leave A Reply

Your email address will not be published.