The news is by your side.

ಕೊರೊನಾ: ಶಾಲೆ ಆರಂಭದಲ್ಲಿ ಇನ್ನೂ ವಿಳಂಬ ಸಾಧ್ಯತೆ: ಸುರೇಶ್ ಕುಮಾರ್ ಸ್ಪಷ್ಟನೆ

ಬೆಂಗಳೂರು: ಶಿಕ್ಷಣ ಸಚಿವ ಸುರೇಶ ಕುಮಾರ್ ಮಕ್ಕಳ ಶಾಲೆ ಆರಂಭದ ಕುರಿತಾದ ಊಹಾಪೋಹಗಳಿಗೆ ಕೊನೆ ಹಾಡಿದ್ದಾರೆ.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಸೆಪ್ಟೆಂಬರ್ ದಿಂದ ಶಾಲೆ ಪ್ರಾರಂಭಿಸಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಆತಂಕದ ನಡುವೆಯೇ ಸೆಪ್ಟೆಂಬರ್ ತಿಂಗಳಲ್ಲಿ ಶಾಲೆ ಆರಂಭವಾಗಲಿವೆ ಎಂಬ ಸುದ್ದಿ ಹರಡುತ್ತಿವೆ. ಆದರೆ ಪೋಷಕರು ಆತಂಕಕ್ಕೆ ಒಳಗಾಗಬಾರದು. ಖಂಡಿತ ಯಾವುದೇ ಕಾರಣಕ್ಕೂ ಸೆಪ್ಟೆಂಬರ್​ನಿಂದ ಶಾಲೆಗಳನ್ನು ಪ್ರಾರಂಭಿಸಲ್ಲ ತಿಳಿಸಿದ್ದಾರೆ.

ನನಗೆ ಬಹಳ ಮುಖ್ಯವಾದ ಆದ್ಯತೆ ಅಂದ್ರೆ, ನಮ್ಮ ಮಕ್ಕಳ ಆರೋಗ್ಯ. ಅದನ್ನ ಬಹಳ ಸುರಕ್ಷತಾ ದೃಷ್ಠಿಯಿಂದ ನೋಡಬೇಕು. ಜೊತೆಗೆ ನಮ್ಮ ಮಕ್ಕಳ ಕಲಿಕೆ ಹೇಗೆ? ಯಾವ ರೀತಿ ಕಲಿಕೆಯನ್ನು ಮುಂದುವರಿಸಬಹುದು ಎಂಬುದಕ್ಕೆ ಈಗಾಗಲೇ ನಮ್ಮ ರಾಜ್ಯದಲ್ಲಿ ವಿದ್ಯಾ ಗಮನ ಎಂಬ ಯೋಜನೆಯನ್ನು ತರಲಾಗಿದೆ. ಈ ವಿದ್ಯಾಗಮನ ಯೋಜನೆ ಇಡೀ ರಾಷ್ಟ್ರವೇ ನೋಡುವಂತ ಅತ್ಯುತ್ತಮ ಯೋಜನೆ ಎಂದು ಹೇಳಿದರು.

Shree Panjurlli Fine Dine ADD

- Advertisement -

Leave A Reply

Your email address will not be published.