The news is by your side.

ಬೆಂಗಳೂರು ಗಲಭೆ: ಖಾನಾಪುರ ಪತ್ರಕರ್ತರ ಖಂಡನೆ: ಮನವಿ ಅರ್ಪಣೆ

ಖಾನಾಪುರ: ಬೆಂಗಳೂರು ಗಲಭೆಯ ಕಾರಣಕರ್ತರ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಿ, ಎಲ್ಲ ಪತ್ರಕರ್ತರಿಗೆ ರಕ್ಷಣೆ ಒದಗಿಸಬೇಕೆಂದು ಖಾನಾಪುರ ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಕಾಶೀಮ ಹಟ್ಟಿಹೊಳಿ ಆಗ್ರಹಿಸಿದ್ದಾರೆ.

ತಾಲೂಕಿನ ತಹಶಿಲ್ದಾರ ಕಚೇರಿಯಲ್ಲಿ ಗ್ರೇಡ-೨ ತಹಶಿಲ್ದಾರ ಕೆ.ವಾಯ್.ಬಿದರಿ ಅವರಿಗೆ ಇಂದು ಖಾನಾಪುರ ಪತ್ರಕರ್ತರು ಈ ಬಗ್ಗೆ ಮನವಿ ಸಲ್ಲಿಸಿದರು.

ಪತ್ರಕರ್ತ ಪ್ರಕಾಶ ದೇಶಪಾಂಡೆ ಅವರು ಮಾತನಾಡಿ ಕರ್ನಾಟಕ ನೆಲದ ಕಾನೂನನ್ನು ಗೌರವಿಸದ ಪ್ರತಿಯೊಬ್ಬರೂ ಶಿಕ್ಷೆಗೆ ಅರ್ಹರು. ಪುಂಡಾಟ ನಡೆಸುತ್ತಿರುವವರ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ‌ ಮಾಡಿದ ಹಲ್ಲೆ ಖಂಡನೀಯವಾಗಿದೆ. ಆದ್ದರಿಂದ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ‌ಕೈಗೊಳ್ಳಬೇಕು. ಮುಂದೆಂದೂ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಜೊತೆಗೆ ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದರು.

ಪೋಲಿಸರು ಮತ್ತು ಪತ್ರಕರ್ತರ ಮೇಲೆ ನಡೆದ ಅಮಾನವೀಯ ಘಟನೆಯನ್ನು ಎಲ್ಲಾ ಪತ್ರಕರ್ತರು ಒಕ್ಕೊರಲಿನಿಂದ ಖಂಡಿಸಿದರು.
ಈ‌ ಸಂಧರ್ಭದಲ್ಲಿ ಖಾನಾಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪೀರಾಜಿ ಕುರಾಡೆ, ಉಪಾಧ್ಯಕ್ಷ ಕಾಶೀಮ ಹಟ್ಟಿಹೊಳಿ, ಕಾರ್ಯದರ್ಶಿ ಪ್ರಸನ್ನ ಕುಲಕರ್ಣಿ, ಪತ್ರಕರ್ತರಾದ ಪ್ರಕಾಶ ದೇಶಪಾಂಡೆ, ಚೇತನ ಲಕ್ಕೆಬೈಲಕರ, ಅಲ್ತಾಫ ಬಸರಿಕಟ್ಟಿ, ವಾಸುದೇವ ಚೌಗಲೆ, ಶಂಕರ ಹಾಗೂ ಮುಂತಾದವರು ಹಾಜರಿದ್ದರು.

Shree Panjurlli Fine Dine ADD

- Advertisement -

Leave A Reply

Your email address will not be published.