The news is by your side.

ಬುಡರಕಟ್ಟಿ ಗ್ರಾಮದಲ್ಲಿ ವಿಶ್ವಗುರು ಶ್ರೀ ಬಸವೇಶ್ವರರ ಆಶ್ವಾರೂಢ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ

ಬೈಲಹೊಂಗಲ: ಇಂದು ಅನೇಕ ಪೂಜ್ಯರ ಉಪಸ್ಥಿಯಲ್ಲಿ ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ಜಗಜ್ಯೋತಿ, ಕ್ರಾಂತಿಯೋಗಿ ವಿಶ್ವಗುರು ಬಸವೇಶ್ವರರ ಆಶ್ವಾರೂಢ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು.

ಗದಗ-ಡಂಬಳದ ತೋಂಟದಾರ್ಯ ಮಠದ ತೋಂಟದ ಡಾ.ಸಿದ್ಧರಾಮ ಸ್ವಾಮಿಗಳು, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಬೈಲೂರಿನ ನಿಷ್ಕಲಮಂಟಪದ ಶ್ರೀ ನಿಜಗುಣಾನಂದ ಶ್ರೀಗಳು, ನಾಗನೂರ ಮಠದ ಅಲ್ಲಮಪ್ರಭು ಸ್ವಾಮಿಗಳು, ಬೈಲಹೊಂಗಲ ಮೂರುಸಾವಿರ ಮಠದ ಪ್ರಭುನೀಲಕಂಠ ಮಹಾಸ್ವಾಮಿಗಳು, ಬೆಳೇರಿಯ ಬಸವಾನಂದ ಸ್ವಾಮಿಗಳು, ಹಾಗೂ ಬುಡರಕಟ್ಟಿ ಗ್ರಾಮದ ಮಡಿವಾಳೇಶ್ವರ ಮಠದ ಪೂಜ್ಯರ ನೇತೃತ್ವದಲ್ಲಿ ವಿಶ್ವಗುರು ಬಸವೇಶ್ವರರ ಅಶ್ವಾರೂಢ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಯಿತು.

ಬೆಳಗಾವಿ ರಾಷ್ಟ್ರೀಯ ಬಸವಸೇನಾ ಜಿಲ್ಲಾಧ್ಯಕ್ಷ ಶಂಕರ ಗುಡಸ ಮಾತನಾಡಿ ಕೊರೊನಾ ತುರ್ತು ಪರಿಸ್ಥಿತಿ ಹಿನ್ನೆಲೆ ಅತ್ಯಂತ ಸರಳವಾಗಿ ಗುರುಬಸವಣ್ಣನವರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಗ್ರಾಮದ ಯುವಕರ ಪರಿಶ್ರಮದ ಫಲವಾಗಿ ಇಂದು ಹಲವು ಶ್ರೀಗಳ ಸಮ್ಮುಖದಲ್ಲಿ ಮೂರ್ತಿ ಅನಾವರಣ ಆಗಿದೆ ಎಂದು ಹೇಳಿದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.