The news is by your side.

ಕಳ್ಳಬಟ್ಟಿ ಸಾರಾಯಿ ದಾಳಿ: 13 ಲೀಟರ್ ವಶಕ್ಕೆ

ಬಾಗಲಕೋಟೆ : ತ್ರಿಚಕ್ರ (ಆಟೋ) ವಾಹನದಲ್ಲಿ ಸಾಗಿಸುತ್ತಿದ್ದ 13 ಲೀಟರ್ ಕಳ್ಳಬಟ್ಟಿ ಸಾರಾಯಿಯನ್ನು ಅಬಕಾರಿ ಇಲಾಖೆ ತಂಡ ಗುರುವಾರ ದಾಳಿ ಮಾಡಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ತಾಲೂಕಿನ ಹೊಸೂರ ಗ್ರಾಮದ ಹತ್ತಿರ ಸೀತಿಮನಿ ತಾಂಡಾದಿಂದ ನಾಗಸಂಪಿಗೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಈ ಪ್ರಕರಣ ನಡೆದಿದೆ.

ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ ಅಬಕಾರಿ ಉಪ ಆಯುಕ್ತರಾದ ರಮೇಶಕುಮಾರ ಎಚ್. ಅವರ ಆದೇಶದ ಮೇರೆಗೆ ಅಬಕಾರಿ ಉಪ ಅಧೀಕ್ಷಕ ಎಸ್.ಎಸ್.ಹಿರೇಮಠ ಅವರ ನೇತೃತ್ವದ ತಂಡ ಪತ್ತೆ ಹಚ್ಚಿ ಗುರುವಾರ ಬೆಳಗಿನ ಜಾವ ದಾಳಿ ನಡಿಸಿತು.

ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕ ಮಂಜುನಾಥ ಸಿಂಗರೆಡ್ಡಿ ಹಾಗೂ ಸಿಬ್ಬಂದಿಗಳಾದ ಬಸವರಾಜ ಬಾಳಶೆಟ್ಟಿ, ಸುರೇಶ ಕುರಣಿ, ಶಿವಾನಂದ ತಳವಾರ, ರಾಜು ಬಳ್ಳಬಟ್ಟಿ ಇದ್ದರು.

ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ-2020 ಮಾಹೆಯಲ್ಲಿ 327 ದಾಳಿ ಮಾಡಿ 16 ಘೋರ ಪ್ರಕರಣ, 16 ಜನ ಆರೋಪಿಗಳು, 2 ತ್ರಿಚಕ್ರ ವಾಹನ, 6 ದ್ವಿಚಕ್ರ ವಾಹನ, 147 ಲೀಟರ್ ಕಳ್ಳಬಟ್ಟಿ ಸಾರಾಯಿ ಜಪ್ತು ಮಾಡಲಾಗಿದೆ.

ಇಂತಹ ಯಾವುದೇ ತರಹದ ಕಳ್ಳಬಟ್ಟಿ, ನಕಲಿ ಮದ್ಯ, ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದ ದೂರುಗಳನ್ನು ಇಲಾಖೆಗೆ ಸಲ್ಲಿಸಬಹುದು ಎಂದು ಬಾಗಲಕೋಟೆ ಅಬಕಾರಿ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Leave A Reply

Your email address will not be published.