The news is by your side.

ಕಳೆದ ವರ್ಷದ ನೆರೆ ಪರಿಹಾರ ನೀಡದ ನಿರ್ಲಜ್ಜ ಸರಕಾರ : ಪ್ರತಿಭಟನೆ

ಚಿಕ್ಕೋಡಿ : ಶುಕ್ರವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನೆರೆ ಪರಿಹಾರ ಮತ್ತು ಗ್ರಾಮಗಳ ಸ್ಥಳಾಂತರಕ್ಕೆ ಒತ್ತಾಯಿಸಿ
ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಗೆ ಮನವಿ ಸಲ್ಲಿಸಲಾಗಿದೆ.

ಪ್ರವಾಹ ಸಂತ್ರಸ್ತರ ಕುಟುಂಬಗಳಿಗೆ ಕೂಡಲೇ ಧನ ಸಹಾಯ ಒದಗಿಸಬೇಕು. ಪ್ರವಾಹ ಸಂತ್ರಸ್ತರ ಮನೆ ನಿರ್ಮಾಣಕ್ಕೆ ವಿಳಂಬ ಮಾಡಬಾರದು. ಪ್ರವಾಹ ಸಂತ್ರಸ್ತರಿಗೆ ಹಂಚಿಕೆ ಮಾಡಿರುವ ನಿವೇಶನಗಳಲ್ಲಿ ಸರಕಾರವೇ ಮನೆಗಳನ್ನು ನಿರ್ಮಿಸಿ ಹಕ್ಕು ಪತ್ರ ವಿತರಿಸಬೇಕು ಎಂದು ಪ್ರತಿಭಟನಾಕಾರರು ಆಗೃಹಿಸಿದರು.
ಕಳೆದ ವರ್ಷ ಪ್ರವಾಹ ಬಂದಾಗ ನೆರೆ ಸಂತ್ರಸ್ತರಿಗೆ ಸರಕಾರ ಕೇವಲ 10 ಸಾವಿರ ರೂ.ಪರಿಹಾರಧನ ನೀಡಿ ಕೈ ತೊಳೆದುಕೊಂಡಿದೆ. ಅದು ಸಹ ಕೆಲವರಿಗೆ ಮುಟ್ಟಿಲ್ಲ.
ಪ್ರವಾಹದಿಂದ ಹಾನಿಗೊಳಗಾಗಿ ಸಂಪೂರ್ಣ ಸ್ಥಳಾಂತರಕ್ಕೆ ಅಗ್ರಹಿಸುತ್ತಿವೆಯೋ ಅವರಿಗೆ ಭೂಮಿ ಗುರುತಿಸಿ ಗ್ರಾಮಗಳನ್ನು ಆದಷ್ಟು ಬೇಗ ಸ್ಥಳಾಂತರ ಮಾಡಬೇಕು. ಸರಕಾರ ಭರವಸೆ ನೀಡಿದಂತೆ ಬಾಡಿಗೆ ಮನೆಗಳಲ್ಲಿ ವಾಸವಾಗಿರುವ ಸಂತ್ರಸ್ತ ಕುಟುಂಬಗಳಿಗೆ ತಿಂಗಳಿಗೆ 5000 ರೂ.ಗಳಂತೆ ಧನ ಸಹಾಯ ಘೋಷಣೆಯಂತೆ ಬಾಕಿ ಉಳಿದಿರುವ ಹಣ ಸಂದಾಯ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ ಎಸ್.ಎಸ್.ಸಂಪಗಾಂವಿಯವರಿಗೂ ಮನವಿ ಸಲ್ಲಿಸಿದರು.
ರೈತ ಸಂಘದ ವಕ್ತಾರ ತ್ಯಾಗರಾಜ ಕದಮ, ದೀಪಕ ಶಿಂಧೆ, ಬಿ.ಆರ್.ಸಂಗಪ್ಪಗೋಳ, ತುಕಾರಾಮ ಕೋಳಿ, ಎಸ್.ವೈ.ಹಂಜಿ, ಬಸವರಾಜ ಡಾಕೆ, ಶಂಕರ ಪಡೇದ, ರೇವಪ್ಪ ತಳವಾರ, ಶಿವಾನಂದ ಬ್ಯಾಳಿ, ಮಧುಕರ ಮಜಲಟ್ಟಿ ಮುಂತಾದವರು ಉಪಸ್ಥಿತರಿದ್ದರು

- Advertisement -

Leave A Reply

Your email address will not be published.