The news is by your side.

ರಾಜ್ಯದಲ್ಲಿ ದಾಖಲೆಯ 7,908 ಪ್ರಕರಣ ಪತ್ತೆ : 104 ಸಾವು

 

ಬೆಂಗಳೂರು : ಕೊರೋನಾ, 104 ಸೋಂಕಿತರನ್ನು ಬಲಿಪಡೆದು 7,908 ಜನರಲ್ಲಿ ಹೊಸದಾಗಿ ವ್ಯಾಪಿಸಿಕೊಂಡಿದ್ದು
ರಾಜ್ಯದಲ್ಲಿ ಶುಕ್ರವಾರ ಅಕ್ಷರಶ ಮರಣ ಮೃದಂಗ ಬಾರಿಸಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,11,108 ಕ್ಕೆ ಏರಿಕೆಯಾಗಿದೆ, ಅಸುನೀಗಿದವರ ಸಂಖ್ಯೆ 3,717 ಕ್ಕೆ ತಲುಪಿದೆ.

ಆತಂಕದ ಮಧ್ಯೆಯೂ ರಾಜ್ಯದಲ್ಲಿ ಚೇತರಿಕೆ ಪ್ರಮಾಣವು ಹೆಚ್ಚಾಗಿದ್ದು ಇಂದು 5,257 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುತ್ತಾರೆ. ಒಟ್ಟಾರೆ 2,11,108 ಕೊರೋನಾ ಪ್ರಕರಣಗಳ ಪೈಕಿ 1,21,242 ಮಂದಿ ಡಿಸ್ಚಾರ್ಜ್ ಆಗಿದ್ದು ಇನ್ನು 80,883 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಇಂದು 2,452 ಮಂದಿ ಕೊರೋನಾಗೆ ತುತ್ತಾಗಿದ್ದು, 22 ಸೋಂಕಿತರು ಅಸುನೀಗಿದ್ದಾರೆ, ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 84,185ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 35,117 ಸಕ್ರೀಯ ಪ್ರಕರಣಗಳಿವೆ.

- Advertisement -

Leave A Reply

Your email address will not be published.