The news is by your side.

ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಅವರಿಗೂ ಕೊರೋನಾ ಸೋಂಕು

ಬೆಳಗಾವಿ : ನಿನ್ನೆಯಷ್ಟೇ ಖಡೆಬಝರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೀರಜ್ ಶಿಂದೆ ಕೊರೋನಾ ಸೋಂಕಿನಿಂದ ಬಿಡುಗಡೆಯಾಗಿ ಸೇವೆಗೆ ಮರಳುತ್ತಿದಂತೆ, ಬೆಳಗಾವಿ ಪೊಲೀಸ್ ಮುಖ್ಯಾಧಿಕಾರಿ ಲಕ್ಷ್ಮಣ ನಿಂಬರಗಿ ಸೋಂಕಿಗೊಳಗಾಗಿದ್ದಾರೆ.

ಶುಕ್ರವಾರ ಪರೀಕ್ಷಿಸಲ್ಪಟ್ಟ ಅವರ ವೈದ್ಯಕೀಯ ವರದಿ ಲಭ್ಯವಾಗಿದ್ದು ಅವರು ಸೋಂಕಿನಿಂದ ಬಾಧಿತರಾಗಿದ್ದಾರೆ. ಈ ವಿಷಯ ಬಹಿರಂಗ ಪಡಿಸಿರುವ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಹತ್ತಿರದ ಸಂಪರ್ಕಕ್ಕೆ ಬಂದವರೆಲ್ಲರೂ ಪರೀಕ್ಷೆಕೊಳಗಾಗುವದು ಸೂಕ್ತವೆಂದು ಸಲಹೆ ನೀಡಿದ್ದಾರೆ.

“ನನಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ನನ್ನ ಜೊತೆ ಸಂಪರ್ಕ ಹೊಂದಿದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ” ಎಂದು ಮನವಿ ಮಾಡಿಕೊಂಡಿದ್ದಾರೆ.

- Advertisement -

Leave A Reply

Your email address will not be published.