ಬೆಳಗಾವಿ : ಇತ್ತೀಚಿಗಷ್ಟೇ 125 ಸಿಲಿಂಡರ್ ಖರೀದಿಸಿ ಜನರಿಗೆ ಉಚಿತ ಸೇವೆಯೊದಗಿಸುತ್ತಿರುವ ಬೆಳಗಾವಿಯ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಮತ್ತೆ ಇನ್ನೂ 50 ಆಕ್ಸಿಜನ್ ಸಿಲಿಂಡರ್ ಕೊಂಡುಕೊಂಡು ಸೇವೆಗೆ ಬಳಸುತ್ತಿದೆ.
ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿರುವ ಆಕ್ಸಿಜನ್ ಸೇವೆ ಹೊಂದುವದು ಮಧ್ಯಮ ಹಾಗು ಬಡ ಆದಾಯದವರಿಗೆ ಸಾಧ್ಯವಿಲ್ಲದ ಮಾತು. ಇದು ಸೋಂಕಿತರ ಸಾವಿನ ಸಂಖ್ಯೆಯೂ ಹೆಚ್ಚಾಗಲು ಕಾರಣ, ಇದನ್ನು ಮನಗಂಡೇ ಅಂಜುಮನ್-ಎ-ಇಸ್ಲಾಂ ಸಂಸ್ಥೆ 125 ದೊಡ್ಡ ಸೈಜಿನ ಆಕ್ಸಿಜನ್ ಸಿಲಿಂಡರ್ ಕೊಂಡು ಸೋಂಕಿತರ ಸೇವೆಗೆ ಬಳಸುತ್ತಿದೆ, ಅವು ಸಾಕಾಗುತ್ತಿಲವಾದ್ದರಿಂದ ಇನೂ 50 ಸಿಲಿಂಡರ್ ಕೊಂಡು ಸೇವೆಯೊದಗಿಸುತ್ತಿದೆ.
ಸಂಸ್ಥೆ ನುರಿತ ಹಾಗು ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿ ಹೊಂದಿದ್ದು ಅವರೇ ಸೋಂಕಿತರಿಗೆ, ಖಾಸಗಿ ಆಸ್ಪತ್ರೆ ಅಥವಾ ಮನೆಗಳೇ ಆಗಿರಬಹುದು ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸ್ಥಳಗಳಲ್ಲೇ ಆಕ್ಸಿಜನ್ ಸಿಲಿಂಡರ್ ಫಿಕ್ಸ್ ಮಾಡಿ, ಪ್ರತಿ ಎರಡು ಗಂಟೆಗೊಮ್ಮೆ ಪರಿಶೀಲಿಸಿ ಸೇವೆ ನೀಡಲಾಗುತ್ತಿದೆ.
ನಗರ ಮಾತ್ರವಲ್ಲದೆ ಗ್ರಾಮೀಣ ಭಾಗಕ್ಕೂ ಸೋಂಕು ಪಸರಿಸಿರುವದರಿಂದ ಬಡವರಿಗೂ ಸೇವೆ ಲಭ್ಯವಾಗುವಂತೆ ಇನ್ನೂ ಹೆಚ್ಚುವರಿಯಾಗಿ 50 ಸಿಲಿಂಡರ್ ಕೊಂಡಿರುವದಾಗಿ ಸಂಸ್ಥೆಯ ಅಧ್ಯಕ್ಷ ಆಸಿಫ್ (ರಾಜು) ಸೇಠ ತಿಳಿಸಿದ್ದಾರೆ.
ಸಿಲಿಂಡರ್ ಸೇವೆಯನ್ನು ಜಾತಿ ಧರ್ಮ ನೋಡದೆ ಎಲ್ಲ ಸಮುದಾಯಕ್ಕೂ ನೀಡಲಾಗುತ್ತಿದೆ, ಅವಶಕತೆಯಿದ್ದವರು ಸಂಪರ್ಕಿಸಿದರೆ ಸೇವೆ ಉಚಿತವಾಗಿ ಒದಗಿಸಲಾಗುವದೆಂದು ತಿಳಿಸಿದ್ದಾರೆ.
ಸಂಸ್ಥೆಯ ಕಾರ್ಯದರ್ಶಿ ಸಮೀವುಲ್ಲಾ ಮಾಡಿವಾಲೆ, ನಿಪ್ಪಾಣಿ, ಕುಡಚಿ, ಚಿಕ್ಕೋಡಿ ಹಾಗೂ ಬೆಳಗಾವಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಆಕ್ಸಿಜನ್ ಸಿಲಿಂಡರ್ ಸೇವೆ ನೀಡುತ್ತಿದ್ದೇವೆ, ಲಭ್ಯವಿದ್ದ ಸಿಲಿಂಡರ್ ಕೂಡ ಕಡಿಮೆಯಾಗಿದ್ದರಿಂದ ಹೆಚ್ಚುವರಿಯಾಗಿ ಇನ್ನು 50 ಖರೀದಿಸಿರುವುದರಿಂದ ಜನರಿಗೆ ಇನ್ನಷ್ಟು ಸೇವೆ ಮಾಡಲು ಅನುಕೂಲ ಆಗಲಿದೆ ಎಂದು ತಿಳಿಸಿದರು.
