ಬೆಳಗಾವಿ : ನಗರದ ಗೋಂಧಳಿ ಗಲ್ಲಿಯ ಮನೆಯೊಂದು ಭೂ ಕುಸಿತದಿಂದ ನೆಲದಲ್ಲಿ ಹುಗಿದು ಹೋಗಿದ್ದು, ನಾಲ್ವರನ್ನು ರಕ್ಷಿಸಲಾಗಿದೆ. ಅಲ್ಲದೇ ಮನೆಯ ಎದುರುಗಡೆಯಿದ್ದ ಬಟ್ಟೆ ಇಸ್ತ್ರಿ ಮಾಡುವ ಅಂಗಡಿ ಕೂಡ ಕುಸಿದಿದೆ.
ಕುಸಿದ ಮನೆಯಲ್ಲಿ ನಾಲ್ವರಿದ್ದು ಅವರೆಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಿ ಹೊರಗೆ ತೆಗೆದುಕೊಂಡು ಬರಲಾಗಿದೆ. ಈ ದುರ್ಘಟನೆ ಕೆಲವೇ ನಿಮಿಷಗಳ ಹಿಂದೆ ಸಂಭವಿಸಿದೆ.
ದುರ್ಘಟನೆ ನೋಡಲು ಜನ ಬರುತ್ತಿರುವದರಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ.
ತಕ್ಷಣ ತುರ್ತು ರಕ್ಷಣಾ ತಂಡ, ಅಗ್ನಿಶಾಮಕ ದಳ, ಹೆಸ್ಕಾಂ ಸಿಬ್ಬಂದಿ, ಪೊಲೀಸರು ಆಗಮಿಸಿ ಸಿಲುಕಿಕೊಂಡವರನ್ನು ರಕ್ಷಿಸಿದ್ದಾರೆ.
